ಇಂದಿನಿಂದ ತೆರೆಯ ಮೇಲೆ ಸೋನು ಸೂದ್ ನಟನೆಯ 'ಶ್ರೀಮಂತ'

ಸೋನು ಸೂದ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕನ್ನಡ ಸಿನಿಮಾ ಶ್ರೀಮಂತ.

ಶ್ರೀಮಂತ ಸಿನಿಮಾ ಚುನಾವಣೆಯ ಅಬ್ಬರದ ಬಳಿಕ ಇಂದು(ಮೇ.19) ತೆರೆಕಂಡಿದೆ.

ಈ ಸಿನಿಮಾದಲ್ಲಿ ಕಿಚ್ಚ ಸುದೀಪ್​​ ಅವರು ಕೂಡ ವಿಶೇಷ ಪಾತ್ರದ ಮೂಲಕ ಕಾಣಿಸಿಕೊಂಡಿದ್ದಾರೆ.

ರೈತರ ಸುತ್ತ ಸಾಗುವ ಈ ಸಿನಿಮಾ ಮೊದಲ ದಿನವೇ ಭಾರೀ ಸದ್ದು ಮಾಡುತ್ತಿದೆ.

ಹಾಸನ್‌ ರಮೇಶ್‌ ಈ ಚಿತ್ರವನ್ನು ನಿರ್ದೇಶಿಸಿದ್ದು, ನಾದಬ್ರಹ್ಮ ಹಂಸಲೇಖ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಈ ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ಕರ್ನಾಟಕದ ಸಾಕಷ್ಟು ರಾಜಕಾರಣಿಗಳು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.