14 ವರ್ಷಗಳಿಂದ ಮಕ್ಕಳಿಲ್ಲದೆ ನೊಂದಿದ್ದ ಲಾಲಿ ಹಾಡು ಸಿನಿಮಾದ ನಟಿ, ತಾಯಂದಿರ ದಿನ ಮಾಡಿದ್ದೇನು ಗೊತ್ತಾ?
ಮೇ 14 ವಿಶ್ವ ತಾಯಂದಿರ ದಿನ ನಟಿ ಅಭಿರಾಮಿ ಹೆಣ್ಣು ಮಗುವೊಂದನ್ನು ದತ್ತು ಪಡೆದುಕೊಂಡಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಕನ್ನಡದಲ್ಲಿ ಲಾಲಿಹಾಡು ಸಿನಿಮಾದಲ್ಲಿ ನಟಿಸಿದ್ದ ನಟಿ ಅಭಿರಾಮಿ.
ಮದುವೆಯಾಗಿ 14 ವರ್ಷಗಳಾಗಿದ್ದರೂ ಮಕ್ಕಳಿಲ್ಲ ಎಂಬ ನೋವು ಕಾಡುತ್ತಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು.
ಇದೀಗಾ ವಿಶ್ವ ತಾಯಂದಿರ ದಿನದಂದು ತನ್ನ ಅಭಿಮಾನಿಗಳೊಂದಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಅಭಿರಾಮಿ 2009ರಲ್ಲಿ ರಾಹುಲ್ ಪವನ್ ಎಂಬವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ನಟಿಯ ಈ ನಿರ್ಧಾರಕ್ಕೆ ಇದೀಗಾ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ.