ಗುರುವಾರ ಜನಿಸಿದವರ ಸ್ವಭಾವ ಹೇಗಿರುತ್ತೆ ಗೊತ್ತಾ?

07 December 2023

Author: Preeti Bhat Gunavanthe

ಗುರುವಾರವು ಹಿಂದೂ ಪಂಚಾಂಗದ ಪ್ರಕಾರ ಅತ್ಯಂತ ಪವಿತ್ರವಾದ ದಿನವಾಗಿದೆ. 

ಈ ದಿನವು ಗುರು ಗ್ರಹಕ್ಕೆ  ಮೀಸಲಾದ ದಿನ ಎಂದು ಹೇಳಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವು ವ್ಯಕ್ತಿಯ ಜೀವನದಲ್ಲಿ ಅತ್ಯಂತ ಅದೃಷ್ಟ ಹಾಗೂ ಯಶಸ್ಸನ್ನು ತಂದುಕೊಡುತ್ತಾನೆ ಎಂದು ಹೇಳಲಾಗುತ್ತದೆ.

ಗುರುವಾರ ಜನಿಸಿದ ವ್ಯಕ್ತಿಗಳು ಉದಾರ ಸ್ವಭಾವದವರಾಗಿರುತ್ತಾರೆ. 

ಇವರು ಜೀವನದಲ್ಲಿ ಎಂತಹ ಸಂಗತಿಗಳು ಎದುರಾದರೂ ಅವುಗಳನ್ನು ಆಶಾವಾದದಿಂದ ನೋಡುವವರಾಗಿರುತ್ತಾರೆ. 

ಇವರು ಉತ್ತಮ ತೀರ್ಪುಗಾರರು ಹೌದು. ಕೆಲವು ಅಭಿಪ್ರಾಯ ಹಾಗೂ ವಿಷಯಗಳ ಬಗ್ಗೆ ಸಲಹೆಯನ್ನುಇವರಂತೆ ಯಾರೂ ನೀಡುವುದಿಲ್ಲ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವಾರ ಜನಿಸಿದವರು ಹೆಚ್ಚಾಗಿ ಶಿಕ್ಷಕ ವೃತ್ತಿ ಮಾಡುತ್ತಾರೆ. 

ಗುರುವಾರ ಗುರುವಿನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದರಿಂದ ಇವರು ಸಂತೋಷದ ಜೀವನ ಪಡೆಯುತ್ತಾರೆ.

Next: ಈಶ್ವರನ ಕೈಯಲ್ಲಿರುವ ಅತ್ಯಂತ ಶಕ್ತಿಶಾಲಿ ಶಸ್ತ್ರ ಮತ್ತು ಅಸ್ತ್ರಗಳು ಯಾವುದು? ಇಲ್ಲಿದೆ ನೋಡಿ