ಬುಧವಾರ ಹುಟ್ಟಿದವರ ಸ್ವಭಾವ ಹೇಗಿರುತ್ತೆ ಗೊತ್ತಾ?

05 December 2023

Author: Preeti Bhat Gunavanthe

ಬುಧವಾರವು ಬುಧ ಗ್ರಹಕ್ಕೆ ಸಂಬಂಧಿಸಿದ ದಿನವಾಗಿದೆ. 

ಈ ಗ್ರಹವು ವ್ಯಕ್ತಿಯ ಜೀವನ ಹಾಗೂ ಭವಿಷ್ಯದಲ್ಲಿ ಸಾಕಷ್ಟು ಅದೃಷ್ಟವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ

ಬುಧವಾರ ಜನಿಸಿದ ವ್ಯಕ್ತಿಗಳು ಹೆಚ್ಚು ಸಂವೇದನಾ ಶೀಲರಾಗಿರುತ್ತಾರೆ.

ಆದರೆ ಜೀವನದ ಕೆಲವು ಸಂಗತಿಗಳಲ್ಲಿ ಅಸಡ್ಡೆ ಹಾಗೂ ಆಲಸ್ಯವನ್ನು ತೋರುತ್ತಾರೆ.

ಕೆಲವು ವಿಷಯದಲ್ಲಿ ನಿಧಾನಗತಿ ಕಂಡರೂ ಸಹ ಬುದ್ಧಿವಂತರೂ, ಚತುರರು ಆಗಿರುತ್ತಾರೆ. 

ಸಂವಹನದಲ್ಲಿ ಅತ್ಯಂತ ಪ್ರವೀಣರಾದ ಇವರು ಎಂತಹವರನ್ನೂ ಸಹ ಮಾತಿನಲ್ಲಿ ಸೋಲಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಇವರು ಯಾವುದೇ ಶುಭ ಕೆಲಸ ಮಾಡುವ ಮುನ್ನ ಬುಧವಾರ ದೇವರಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ.

ಹೆಚ್ಚಾಗಿ ಇವರು ಗಣಿತ, ವಿಜ್ಞಾನ ಹಾಗೂ ಪ್ರಾಯೋಗಿಕ ಸಂಗತಿಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಅತ್ಯುತ್ತಮ ಸ್ಥಾನ ಪಡೆದುಕೊಳ್ಳುತ್ತಾರೆ.