ಗಣೇಶನಿಗೆ ಅತ್ಯಂತ ಪ್ರಿಯವಾದ ವಸ್ತುಗಳಲ್ಲಿ ಮೋದಕ ಕೂಡ ಒಂದು. ಗಣೇಶನನ್ನು ಮೋದಕ ಪ್ರಿಯ ಎನ್ನುವ ಹೆಸರಿಂದ ಕೂಡ ಕರೆಯಲಾಗುತ್ತದೆ.
ಮೋದಕ
ಗರಿಕೆಯನ್ನು ಪಾರ್ವತಿ ಗಣೇಶನ ಹಸಿವನ್ನು ನೀಗಿಸಲು ನೀಡುತ್ತಾಳೆ. ಆದ್ದರಿಂದ ಗಣೇಶನಿಗೆ ಗರಿಕೆಯೆಂದರೆ ಅತ್ಯಂತ ಪ್ರಿಯ ಎನ್ನಲಾಗುತ್ತದೆ
ಗರಿಕೆ
ಭಗವಾನ್ ಗಣೇಶನು ಎಲ್ಲಾ ಹಣ್ಣುಗಳಲ್ಲಿ ಬಾಳೆಹಣ್ಣನ್ನು ಅತ್ಯಂತ ಇಷ್ಟ ಪಡುತ್ತಾನೆ ಹಾಗಾಗಿ ಪೂಜೆಯಲ್ಲಿ ಬಾಳೆಹಣ್ಣನ್ನು ಇಡಲೇಬೇಕು.
ಬಾಳೆಹಣ್ಣು
ಗಣೇಶ ಪೂಜೆಯಲ್ಲಿ ನೈವೇದ್ಯವಾಗಿ ಮೋದಕವನ್ನು ಮಾತ್ರವಲ್ಲ, ಮೋತಿಚೂರ್ ಲಡ್ಡುಗಳನ್ನು ಕೂಡ ಅರ್ಪಿಸಬೇಕು.
ಮೋತಿಚೂರ್ ಲಡ್ಡು
ಗಣೆಶನಿಗೆ ಮಂಡಕ್ಕಿಯಿಂದ ತಯಾರಿಸಿದ ಸಿಹಿ ಖಾದ್ಯವೆಂದರೂ ಕೂಡ ಇಷ್ಟ. ಆದ್ದರಿಂದ ನೀವು ಗಣೇಶ ಪೂಜೆಯಲ್ಲಿ ಮಂಡಕ್ಕಿ ಲಡ್ಡು ಅಥವಾ ಮಂಡಕ್ಕಿಯಿಂದ ಮಾಡಿದ ಸಿಹಿ ಖಾದ್ಯವನ್ನು ಅರ್ಪಿಸಬಹುದು.
ಮಂಡಕ್ಕಿ ಲಡ್ಡುಲಡ್ಡು
ಗಣೇಶ ಪೂಜೆಯಲ್ಲಿ ಗೊಂಡೆ ಹೂವು ಅಥವಾ ಚೆಂಡು ಹೂವನ್ನೂ ಕೂಡ ಅರ್ಪಿಸಿ.
ಗೊಂಡೆ ಹೂವು
ಶಂಖದ ಶಬ್ಧವು ಗಣೇಶನನ್ನು ಸಂತೋಷಗೊಳಿಸುತ್ತದೆ. ಗಣೇಶ ಪೂಜೆಯಲ್ಲಿ ನಾವು ಶಂಖದ ನೀರನ್ನು ಕೂಡ ಗಣೇಶನಿಗೆ ಅರ್ಪಿಸಬಹುದು.
ಶಂಖ
ಬುಧವಾರದ ಗಣೇಶ ಪೂಜೆಯಲ್ಲಿ ಸಿಂಧೂರದಿಂದ ದೇವರನ್ನು ಅಲಂಕರಿಸಿ ಪೂಜಿಸಬೇಕು.