ದುರ್ಗಾದೇವಿಗೆ ಯಾವ ರೀತಿಯ ನೈವೇದ್ಯ ಅರ್ಪಿಸಬೇಕು ?

14 Dec 2023

Author: Preeti Bhat Gunavanthe

ದುರ್ಗಾ ದೇವಿಯನ್ನು ಶಕ್ತಿಯ ದೇವತೆ ಎಂದು ಪರಿಗಣಿಸಲಾಗುತ್ತದೆ.

ಆಕೆಗೆ ಕೆಂಪು ಬಣ್ಣ ಎಂದರೆ ಬಲು ಪ್ರೀತಿ. ಹಾಗಾಗಿ ಮಂಗಳವಾರ ಶುಕ್ರವಾರದಂದು ಕೆಂಪು ಬಣ್ಣದ ಬಟ್ಟೆ ದಾನ ಮಾಡಿ. 

ದುರ್ಗಾ ದೇವಿಗೆ ನೀವು ಪಾಯಸವನ್ನು, ಮಲ್ಪುವಾವನ್ನು ನೈವೇದ್ಯಕ್ಕೆ ಇರಿಸಬಹುದು. ಇದು ತುಂಬಾ ಶ್ರೇಷ್ಠವಾಗಿದೆ.

ಆಕೆಗೆ ಸಿಹಿ ಕಡುಬು, ಮಂಡಕ್ಕಿ ಮತ್ತು ಸಿಹಿತಿಂಡಿಗಳೆಂದರೆ ಕೂಡ ತುಂಬಾ ಇಷ್ಟ.

ನೀವು ತಾಯಿಯ ಭಕ್ತರಾಗಿದ್ದರೆ, ಬುಧವಾರ ಮತ್ತು ಶುಕ್ರವಾರದಂದು ಯಾವುದೇ ರೀತಿಯ ಅನ್ಯಾಹಾರ ತಿನ್ನದೆ ದುರ್ಗಾ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ. 

ಬುಧವಾರ ಮತ್ತು ಶುಕ್ರವಾರದಂದು  ನೀವು ನೈವೇದ್ಯ ಅರ್ಪಿಸಿದರೆ ನಿಮಗೆ ಉತ್ತಮ ಫಲ ಪ್ರಾಪ್ತಿಯಾಗುತ್ತದೆ. 

ತೆಂಗಿನಕಾಯಿ ಎಲ್ಲಾ ದೇವರಿಗೂ ಶ್ರೇಷ್ಠ ಹಾಗಾಗಿ ಪೂಜೆ ಅಥವಾ ನೈವೇದ್ಯಕ್ಕೆ ತೆಂಗಿನಕಾಯಿ ಅಥವಾ ಅದರಿಂದ ಮಾಡಿದ ಆಹಾರಗಳನ್ನು ದೇವಿಗೆ ಅರ್ಪಿಸಿ.

ಸಾಮಾನ್ಯವಾಗಿ ದೇವಿ ಪೂಜೆಯಲ್ಲಿ ಬಾಳೆಹಣ್ಣನ್ನು ತಪ್ಪದೆ ಅರ್ಪಿಸಿ.