ಈ ಬಾರಿಯ ಎಳ್ಳ ಅಮಾವಾಸ್ಯೆಯನ್ನು ಜನವರಿ 11 (ಗುರುವಾರ) ರಂದು ಆಚರಣೆ ಮಾಡಲಾಗುತ್ತದೆ.
Pic Credit - Pintrest
ಈ ಅಮಾವಾಸ್ಯೆಯನ್ನು ಮಾರ್ಗಶಿರ ಅಮಾವಾಸ್ಯೆ ಅಥವಾ ಎಳ್ಳ ಅಮಾವಾಸ್ಯೆ ಅಥವಾ ದರ್ಶ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.
Pic Credit - Pintrest
ಅಮಾವಾಸ್ಯೆ ದಿನವು ಲಕ್ಷ್ಮೀ ದೇವಿ ಮತ್ತು ಶಿವನ ಆರಾಧನೆಗೆ ಮತ್ತು ಪೂರ್ವಜರ ಶಾಂತಿಗಾಗಿ ಬಹಳ ಫಲಪ್ರದವಾಗಿದೆ.
Pic Credit - Pintrest
ಜೀವನದಲ್ಲಿ ಸಂಪತ್ತು ಮತ್ತು ಸಂತೋಷ ಬಯಸುವವರು ಮಹಾಲಕ್ಷ್ಮೀಯನ್ನು ಈ ದಿನ ಆರಾಧಿಸಬಹುದು.
Pic Credit - Pintrest
ಮಾರ್ಗಶಿರ ಅಮವಾಸ್ಯೆಯನ್ನು ಪವಿತ್ರ ಸ್ನಾನಕ್ಕೆ ವಿಶೇಷವೆಂದು ಕೂಡ ಪರಿಗಣಿಸಲಾಗಿದೆ.
Pic Credit - Pintrest
ಮಹಾಭಾರತದಲ್ಲಿ ಪಾಂಡವರು ಹಾಗೂ ಕೌರವರ ನಡುವೆ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಮಡಿದಂತಹ ಅವರ ಬಂಧುಮಿತ್ರರಿಗಾಗಿ ಪಿಂಡ ಪ್ರಧಾನ ಮಾಡಿರುವ ಈ ದಿನವನ್ನು ಎಳ್ಳ ಅಮಾವಾಸ್ಯೆ ಎಂದು ಆಚರಿಸಲಾಗುತ್ತದೆ.
Pic Credit - Pintrest
ಈ ದಿನ ರೈತರು ತಮ್ಮ ಜಮೀನಿನಲ್ಲಿ ಎಳ್ಳು ಹಾಗೂ ಬೆಲ್ಲವನ್ನು ಚಿಮ್ಮುತ್ತಾರೆ. ಇವುಗಳು ಭೂಮಿಯ ಫಲವತ್ತತೆಯನ್ನು ಕಾಪಾಡುವ ಎರೆಹುಳಗಳಿಗೆ ಆಹಾರವಾಗುತ್ತದೆಯೆಂಬ ಉದ್ದೇಶದಿಂದ ಇದನ್ನು ಚಿಮ್ಮಲಾಗುತ್ತದೆ.
Pic Credit - Pintrest
ಈ ದಿನ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.
Pic Credit - Pintrest
Next: ಕಪ್ಪು ಚುಕ್ಕೆಗಳಿರುವ ಬಾಳೆ ಹಣ್ಣುಗಳನ್ನು ಕೊಳೆತಿದೆ ಎಂದು ಬಿಸಾಡಬೇಡಿ!