ಇವೇ ನೋಡಿ ವಿಜ್ಞಾನಕ್ಕೆ ಸವಾಲಾಗಿರುವ ಭಾರತದ 10 ನಿಗೂಢ ದೇವಾಲಯಗಳು

21-12-2023

Author: Ayesha

ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನವು 52 ಶಕ್ತಿ ಪೀಠಗಳ ಪೈಕಿ ಒಂದು. ಇಲ್ಲಿ ಮಾನ್ಸೂನ್ ಸಮಯದಲ್ಲಿ ಮೂರು ದಿನಗಳ ಕಾಲ ಕಾಮಾಕ್ಯ ದೇವಿಯ ವಾರ್ಷಿಕ ಋತುಚಕ್ರದ ಆಚರಣೆ ಮಾಡಲಾಗುತ್ತೆ. ಈ ವೇಳೆ ಬ್ರಹ್ಮಪುತ್ರ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗುತ್ತದೆ.  

ಕಾಮಾಕ್ಯ ದೇವಿ, ಅಸ್ಸಾಂ

ಸೋಮವಂಶಿಯ ರಾಜನು ತನ್ನ ರಾಜಧಾನಿಯನ್ನು ಜೈಪುರದಿಂದ ಭುವನೇಶ್ವರಕ್ಕೆ 11 ನೇ ಶತಮಾನದಲ್ಲಿ ಸ್ಥಳಾಂತರಿಸಿದಾಗ ಈ ಲಿಂಗರಾಜ ದೇವಾಲಯವನ್ನು ಭುವನೇಶ್ವರದಲ್ಲಿ ಸ್ಥಾಪಿಸಿದನು. ಈ ದೇವಾಲಯವು ಸುಮಾರು 1100 ವರ್ಷಕಿಂತಲೂ ಹಳೆಯ ಹಾಗೂ ಅತಿ ದೊಡ್ಡ ದೇವಾಲಯ.

ಲಿಂಗರಾಜ ದೇವಾಲಯ, ಭುವನೇಶ್ವರ

ಇಲ್ಲಿ ಕಾಳ ಭೈರವನ ವಿಗ್ರಹಕ್ಕೆ ಮದ್ಯವನ್ನು ಕುಡಿಸಲಾಗುತ್ತೆ. ಮದ್ಯವೇ ನೈವೇದ್ಯ, ಮದ್ಯವೇ ಪ್ರಸಾದ. ದೇವಾಲಯದ ಹೊರಗೆ ಕೂಡ ಪೂಜಾ ಸಾಮಾಗ್ರಿಗಳೆಂದು ಅನೇಕ ಅಂಗಡಿಗಳಲ್ಲಿ ಮದ್ಯವನ್ನು ನೀಡುತ್ತಾರೆ.  

ಕಾಳ ಭೈರವನಾಥ ದೇವಾಲಯ, ವಾರಣಾಸಿ

ಎಲ್ಲೋರಾದ ಕೈಲಾಸ ದೇವಾಲಯವು ಯಾವುದೇ ಆಧುನಿಕ ಉಪಕರಣಗಳನ್ನು ಬಳಸದೆ  ಅದ್ಬುತ ವಾಸ್ತುಶಿಲ್ಪ ಕಲೆಯನ್ನು ಹೊಂದಿರುವ ಏಕಶಿಲಾ ದೇವಸ್ಥಾನಗಳಲ್ಲಿ ಒಂದಾಗಿದೆ.  ಈ ದೇವಾಲಯವನ್ನು ರಾಷ್ಟ್ರಕೂಟ ವಂಶದ ರಾಜ ಒಂದನೇ ಕೃಷ್ಣ ನಿರ್ಮಿಸಿದ.

ಕೈಲಾಸ ದೇವಾಲಯ, ಎಲ್ಲೋರ

ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂಗಳ ಪ್ರಮುಖ ದೇವಾಲಯಗಳಲ್ಲಿ ಒಂದು. ಇಲ್ಲಿಗೆ ಪ್ರತಿ ದಿನ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಾರೆ. ಇದು ಆಂಧ್ರಪ್ರದೇಶದ ಚಿತ್ತೂರಿನಲ್ಲಿದೆ. ಇಲ್ಲಿರುವ ವೆಂಕಟೇಶ್ವರ ವಿಗ್ರಹ ಬೆವರುತ್ತೆ ಎಂದು ಹೇಳಲಾಗುತ್ತೆ.

ತಿರುಪತಿ ದೇವಸ್ಥಾನ, ಆಂಧ್ರ ಪ್ರದೇಶ

ಆಂಧ್ರ ಪ್ರದೇಶದಲ್ಲಿರುವ ಲೇಪಾಕ್ಷಿ ರಾಮಾಯಣ ಕಾಲದ ನಂಟನ್ನೂ ಹೊಂದಿದೆ. ಶ್ರೀರಾಮ ದೇವರು ಇಲ್ಲಿಗೆ ಬಂದಿದ್ದಾಗಿ ಐತಿಹ್ಯಗಳು ಸಿಗುತ್ತವೆ. ಇಲ್ಲಿ ಸೀತೆಯ ಪಾದ ಎನ್ನಲಾಗುವ 8 ಅಡಿ ಉದ್ದದ ಬೃಹತ್ ಪಾದದ ಗುರುತಿದೆ. ಈ ಸ್ಥಳಕ್ಕೆ ಲೇಪಾಕ್ಷಿ ಎಂದು ಹೆಸರು ಬರಲು ದೊಡ್ಡ ಕಾರಣವಿದೆ.

ವೀರಭದ್ರ ದೇವಸ್ಥಾನ, ಲೇಪಾಕ್ಷಿ 

ಮೆಹಂದಿಪುರ ಬಾಲಾಜಿ ದೇವಸ್ಥಾನ, ರಾಜಸ್ಥಾನ

ಈ ದೇವಸ್ಥಾನ ದೆವ್ವ ಬಿಡಿಸಲು ಪ್ರಸಿದ್ಧಿ ಹೊಂದಿದೆ. ಈ ದೇವಸ್ಥಾನದ ಒಳಗೆ ಯಾರೂ ಏನನ್ನೂ ತಿನ್ನುವಂತಿಲ್ಲ. ಇಲ್ಲಿ ಪ್ರಸಾದವನ್ನೂ ಸಹ ಕೊಡಲ್ಲ. ಅಲ್ಲದೆ, ದೇವಾಲಯದ ಆವರಣದಿಂದ ಹೊರಬರುವಾಗ ಹಿಂತಿರುಗಿ ನೋಡಬಾರದು. ಫೋಟೋಗಳನ್ನು ತೆಗೆಯುವುದು ನಿಷೇಧ.

ಈ ದೇವಾಲಯವು ದಿನಕ್ಕೆ 2 ಬಾರಿ ಸಂಪೂರ್ಣವಾಗಿ ಸಮುದ್ರದಲ್ಲಿ ಮುಳುಗಿ ಹೋಗುತ್ತದೆ. ದಿನದಲ್ಲಿ ಒಮ್ಮೆ ಮಾತ್ರ ದರ್ಶನ ಸಿಗೋದು. ಮುಖ್ಯವಾಗಿ ಈ ದೇವಾಲಯದಲ್ಲಿ ಮಹಾಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ.  

ಸ್ತಂಭೇಶ್ವರ ಮಹಾದೇವ್ ದೇವಸ್ಥಾನ, ಗುಜರಾತ್

ಇಲ್ಲಿ ಶಿವನ ಮಡದಿಯಾದ ಪಾರ್ವತಿ ದೇವಿ ಮೀನಾಕ್ಷಿಯಾಗಿ ನೆಲೆಸಿದ್ದಾಳೆ. ಶಿವನು ಸುಂದರೇಶ್ವರನಾಗಿ ನೆಲೆಸಿದ್ದಾನೆ. ಜಗತ್ತಿನ ಅತಿ ಪ್ರಾಚೀನ ಪಟ್ಟಣಗಳ ಪೈಕಿ ಮದುರೈ ಸಹ ಒಂದು. ಇದು ಅನೇಕ ಪವಾಡಗಳನ್ನು ಹೊತ್ತು ನಿಂತಿದೆ.

ಮೀನಾಕ್ಷಿ ಅಮ್ಮನ ದೇವಸ್ಥಾನ, ಮಧುರೈ

ಇಲ್ಲಿ ಡ್ರೆಸ್ ಕೋಡ್ ಅನುಸರಿಸಲಾಗುತ್ತೆ. ಪುರುಷರು 'ಧೋತಿ' ಧರಿಸಬೇಕು, ಮತ್ತು ಮಹಿಳೆಯರು 'ಸೀರೆ' ಧರಿಸಿದರೆ ಮಾತ್ರ ದರ್ಶನಕ್ಕೆ ಅವಕಾಶ. ಪದ್ಮನಾಭ ದೇವಾಲಯವು 8 ನೇ ಶತಮಾನದ್ದಾಗಿದೆ.

ಪದ್ಮನಾಭಸ್ವಾಮಿ ದೇವಸ್ಥಾನ ತಿರುವನಂತಪುರಂ, ಕೇರಳ