Akshatha Vorkady

11 Jan 2025

Pic credit - Pintrest

ಪ್ರತಿಷ್ಠಾ ದ್ವಾದಶಿ: ರಾಮಲಲ್ಲಾ ಪ್ರತಿಷ್ಠಾಪನೆಗೆ ವರ್ಷದ ಹರ್ಷ

ರಾಮಲಾಲ್ಲಾ ವಿಗ್ರಹ ಪ್ರತಿಷ್ಠಾಪನೆಯ ವಾರ್ಷಿಕೋತ್ಸವಕ್ಕೆ ಅಯೋಧ್ಯೆ ಸಂಪೂರ್ಣ ಸಿದ್ಧಗೊಂಡಿದೆ.

Pic credit - Pintrest

ಶ್ರೀರಾಮ ಜನ್ಮಭೂಮಿಯ ಭವ್ಯ ಮಂದಿರದಲ್ಲಿ ಇಂದಿನಿಂದ ಮೂರು ದಿನಗಳ ಪ್ರತಿಷ್ಠಾ ದ್ವಾದಶಿ ಆಚರಣೆಯ ಸಂಭ್ರಮ  ಆರಂಭವಾಗುತ್ತಿದೆ.

Pic credit - Pintrest

ಕಳೆದ ವರ್ಷ 2024 ರ ಜ. 22 ರಂದು ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಿತ್ತು.

Pic credit - Pintrest

ಆದರೆ ಈ ವರ್ಷ ದ್ವಾದಶಿ ತಿಥಿಯು ಜನವರಿ 11 ರಂದು ಬಂದಿರುವುದರಿಂದ ಇಂದಿನಿಂದ ಜ. 13 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

Pic credit - Pintrest

ಅಂದರೆ ಹಿಂದೂ ಪಂಚಾಂಗದ ತಿಥಿಯ ಪ್ರಕಾರ ಇವತ್ತಿಗೆ ಮಂದಿರ ನಿರ್ಮಾಣವಾಗಿ ಲೋಕಾರ್ಪಣೆಗೊಂಡು ಒಂದು ವರ್ಷ ಪೂರ್ಣವಾಗಿದೆ.

Pic credit - Pintrest

ಮೊದಲ ದಿನವಾದ ಜನವರಿ 11 ರಂದು ರಾಮಲಲ್ಲಾ ಮಹಾಭಿಷೇಕ, ಅಲಂಕಾರ, ಅರ್ಪಣೆ ಹಾಗೂ ಆರತಿ ನಡೆಯಲಿದೆ.

Pic credit - Pintrest

ಬಾಲ ರಾಮನ ಉತ್ಸವ ಮೂರ್ತಿಗೆ ದೆಹಲಿಯಿಂದ ವಿಶೇಷ ವಸ್ತ್ರ ತರಿಸಲಾಗಿದ್ದು,ಇವುಗಳ ನೇಯ್ಗೆ ಮತ್ತು ಕಸೂತಿಯನ್ನು ಚಿನ್ನ ಮತ್ತು ಬೆಳ್ಳಿಯ ತಂತಿಯಿಂದ ಮಾಡಲಾಗಿದೆ.

Pic credit - Pintrest

ಆಕರ್ಷಕ ಕೇಶಾಲಂಕಾರಗಳು  ಇಲ್ಲಿವೆ