ಈಶ್ವರನ ಕೈಯಲ್ಲಿರುವ ಅತ್ಯಂತ ಶಕ್ತಿಶಾಲಿ ಶಸ್ತ್ರ ಮತ್ತು ಅಸ್ತ್ರಗಳು ಯಾವುದು? ಇಲ್ಲಿದೆ ನೋಡಿ 

06 December 2023

Author: Preeti Bhat Gunavanthe

ಇದನ್ನು ಮಂತ್ರಪೂರ್ವಕವಾಗಿ ಅಭಿಮಂತ್ರಿಸಿ ಪ್ರಯೋಗಿಸಿದರೆ ಸಾವಿರಾರು ಶೂಲ, ಗದೆ, ವಿಷಸರ್ಪಗಳಿಗೆ ಸಮನಾದ ಬಾಣಗಳನ್ನು ಉತ್ಪಾದನೆ ಮಾಡುವ ಸಾಮರ್ಥ್ಯವಿತ್ತು ಎಂದು ಹೇಳಲಾಗುತ್ತದೆ.

ಪಾಶುಪತಾಸ್ತ್ರ

ಶಿವ ಧನಸ್ಸು ತಯಾರು ಮಾಡಿದವರು ದೇವ ಶಿಲ್ಪಿ ವಿಶ್ವಕರ್ಮರು. ಇವರು ಧನಸ್ಸುಗಳಲ್ಲಿ ಪಿನಾಕ ಧನಸ್ಸನ್ನು ಶಿವನಿಗೆ, ಸಾರಂಗ ಧನಸ್ಸನ್ನು ವಿಷ್ಣುವಿಗೆ ನೀಡಿದ್ದರು.

ಪಿನಾಕ (ಧನಸ್ಸು)

ಚಂದ್ರಹಾಸವು ರಾವಣನಿಗೆ ಶಿವ ಉಡುಗೊರೆಯಾಗಿ ನೀಡುವ ಅವಿನಾಶಿ ಖಡ್ಗವಾಗಿದೆ.

ಚಂದ್ರಹಾಸ (ಖಡ್ಗ)

ತಪಸ್ಸು ಮಾಡಿ ಪರಶುರಾಮ ಪಡೆದ ವಿನಾಶಕಾರಿ ಶಸ್ತ್ರಾಸ್ತ್ರವೇ ಪರಶು. 

ವಿದ್ಯುದಭಿ (ಪರಶು)

ಶಿವನು ವಿಶ್ವವನ್ನು ನಾಶಮಾಡಬಹುದಾದ ಅಸ್ತ್ರವನ್ನು ಕೂಡ ತನ್ನ ದಂಡದಿಂದ ನಿಯಂತ್ರಿಸುತ್ತಿದ್ದನಂತೆ.

ಖಟ್ವಾಂಗ (ದಂಡ)

ಸೃಷ್ಟಿಯ ಆರಂಭದಲ್ಲಿ, ಶಿವನು ಬ್ರಹ್ಮನಾದದಿಂದ ಕಾಣಿಸಿಕೊಂಡಾಗ, ಅವನೊಂದಿಗೆ ರಾಜ್, ತಂ ಮತ್ತು ಸತ್ ಈ ಮೂರು ಗುಣಗಳು ಕಾಣಿಸಿಕೊಂಡವು ಎಂದು ನಂಬಲಾಗಿದೆ. ಈ ಮೂರು ಗುಣಗಳು ಶಿವನ ತ್ರಿಶೂಲವಾಯಿತು ಎನ್ನಲಾಗುತ್ತದೆ.

ತ್ರಿಶೂಲ

ಬ್ರಹ್ಮಾಸ್ತ್ರವನ್ನು ಅತ್ಯಂತ ಅಪಾಯಕಾರಿ ಆಯುಧವೆಂದು ಪರಿಗಣಿಸಲಾಗುತ್ತದೆ. ಅದರ ಪ್ರತೀಕಾರವಾಗಿ ಇನ್ನೊಂದು ಬ್ರಹ್ಮಾಸ್ತ್ರವನ್ನು ಬಿಡುಗಡೆ ಮಾಡಿದಾಗ ಮಾತ್ರ ಈ ಅಸ್ತ್ರದ ನಾಶವನ್ನು ತಪ್ಪಿಸಬಹುದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಬ್ರಹ್ಮಾಸ್ತ್ರ

ರಕ್ಕಸಿ ತಾಟಕಿ ಸಂಹಾರಕ್ಕಾಗಿ ಈ ಆಯುಧವನ್ನು ಬಳಸಲಾಗಿತ್ತುಎಂದು ಪುರಾಣ ಹೇಳುತ್ತದೆ.

ವರುಣಾಸ್ತ್ರ