ಏಕದಿನ ವಿಶ್ವಕಪ್ ಆರಂಭವಾಗಿ ಇಂದಿಗೆ 6 ದಿನ ಕಳೆದಿವೆ. ಈ 6 ದಿನಗಳಲ್ಲಿ ಒಟ್ಟು 10 ಶತಕ ದಾಖಲಾಗಿವೆ. ಅವುಗಳ ಪಟ್ಟಿ ಇಲ್ಲಿದೆ.

11 October 2023

ಡೆವೊನ್ ಕಾನ್ವೇ: ಅಕ್ಟೋಬರ್ 5 ರಂದು ಅಹಮದಾಬಾದ್​ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 121 ಎಸೆತಗಳಲ್ಲಿ ಅಜೇಯ 151 ರನ್ ಬಾರಿಸಿದ್ದರು.

ರಚಿನ್ ರವೀಂದ್ರ: ಅಕ್ಟೋಬರ್ 5 ರಂದು ಅಹಮದಾಬಾದ್​ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 96 ಎಸೆತಗಳಲ್ಲಿ ಅಜೇಯ 123 ರನ್ ಬಾರಿಸಿದ್ದರು.

ಕ್ವಿಂಟನ್ ಡಿ ಕಾಕ್: ಅಕ್ಟೋಬರ್ 7 ರಂದು ದೆಹಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 84 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.

ರಾಸ್ಸಿ ವ್ಯಾನ್ ಡೆರ್ ಡಸ್ಸೆನ್: ಅಕ್ಟೋಬರ್ 7 ರಂದು ದೆಹಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 110 ಎಸೆತಗಳಲ್ಲಿ 108 ರನ್ ಸಿಡಿಸಿದ್ದಾರೆ.

ಏಡೆನ್ ಮಾರ್ಕಮ್: ಅಕ್ಟೋಬರ್ 7 ರಂದು ದೆಹಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 54 ಎಸೆತಗಳಲ್ಲಿ 106 ರನ್ ಸಿಡಿಸಿದ್ದಾರೆ.

ಡೇವಿಡ್ ಮಲನ್: ಅಕ್ಟೋಬರ್ 10 ರಂದು ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 107 ಎಸೆತಗಳಲ್ಲಿ 140 ರನ್ ಕಕಲೆಹಾಕಿದ್ದಾರೆ.

ಕುಸಾಲ್ ಮೆಂಡಿಸ್: ಅಕ್ಟೋಬರ್ 10 ರಂದು ಹೈದರಾಬಾದ್​ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 77 ಎಸೆತಗಳಲ್ಲಿ 122 ರನ್ ಕಲೆಹಾಕಿದ್ದಾರೆ.

ಸದೀರ ಸಮರವಿಕ್ರಮ: ಅಕ್ಟೋಬರ್ 10 ರಂದು ಹೈದರಾಬಾದ್​ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 89 ಎಸೆತಗಳಲ್ಲಿ 108 ರನ್ ಕಲೆಹಾಕಿದ್ದಾರೆ.

ಅಬ್ದುಲ್ಲಾ ಶಫೀಕ್: ಅಕ್ಟೋಬರ್ 10 ರಂದು ಹೈದರಾಬಾದ್​ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 103 ಎಸೆತಗಳಲ್ಲಿ 113 ರನ್ ಕಲೆಹಾಕಿದ್ದಾರೆ.

ಮೊಹಮ್ಮದ್ ರಿಜ್ವಾನ್ - ಅಕ್ಟೋಬರ್ 10 ರಂದು ಹೈದರಾಬಾದ್​ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 121 ಎಸೆತಗಳಲ್ಲಿ 131 ರನ್ ಕಲೆಹಾಕಿದ್ದಾರೆ.