ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾವನ್ನು ಜನವರಿ 18 ರ ಶನಿವಾರ ಪ್ರಕಟಿಸಲಾಗಿದ್ದು, ಇದರಲ್ಲಿ 15 ಆಟಗಾರರು ಸ್ಥಾನ ಪಡೆದಿದ್ದಾರೆ.
Pic credit: Google
ಗಾಯದ ಹೊರತಾಗಿಯೂ ಪ್ರಸ್ತುತ ತಂಡದಲ್ಲಿ ಆಯ್ಕೆಯಾಗಿರುವ ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಬಗ್ಗೆ ಇದೀಗ ಎಲ್ಲರ ದೃಷ್ಟಿ ನೆಟ್ಟಿದೆ.
Pic credit: Google
ಇದರ ಜೊತೆಗೆ ಈ ಐಸಿಸಿ ಟೂರ್ನಿಗೆ ಶುಭಮನ್ ಗಿಲ್ ಅಧಿಕೃತವಾಗಿ ಟೀಂ ಇಂಡಿಯಾದ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
Pic credit: Google
ಈ ಹಿಂದೆ, ಕಳೆದ ವರ್ಷ ಶ್ರೀಲಂಕಾ ಪ್ರವಾಸದ ವೇಳೆ ಗಿಲ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿತ್ತು ಆದರೆ ಆ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಇರಲಿಲ್ಲ.
Pic credit: Google
ಈ ಬಾರಿ ಹಾರ್ದಿಕ್ ಮತ್ತು ಬುಮ್ರಾ ಅವರ ಉಪಸ್ಥಿತಿಯ ಹೊರತಾಗಿಯೂ, ಆಯ್ಕೆ ಸಮಿತಿಯು ಗಿಲ್ ಅವರನ್ನು ಉಪನಾಯಕನನ್ನಾಗಿ ಮಾಡುವ ಮೂಲಕ ಭವಿಷ್ಯದ ನಾಯಕತ್ವದ ಹಾದಿಯನ್ನು ತೋರಿಸಿದೆ.
Pic credit: Google
ಕಾಕತಾಳೀಯ ಎಂಬಂತೆ ಜನವರಿ 18 ರ ದಿನಾಂಕ ಶುಭ್ಮನ್ ಗಿಲ್ ವೃತ್ತಿಜೀವನದ ಅತ್ಯಂತ ಶುಭ ದಿನ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.
Pic credit: Google
ಇದಕ್ಕೂ ಮೊದಲು, ಜನವರಿ 18, 2023 ರಂದು ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸುವ ಮೂಲಕ ಗಿಲ್ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು.