ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ಔಟ್ ಮಾಡಿರುವ 9 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

13 November 2023

ಕೊಹ್ಲಿ ಇದುವರೆಗೆ ಏಕದಿನದಲ್ಲಿ 5 ಹಾಗೂ ಟಿ20 ಕ್ರಿಕೆಟ್​ನಲ್ಲಿ 4 ವಿಕೆಟ್ ಪಡೆದಿದ್ದಾರೆ.

ಆಲಿಸ್ಟರ್ ಕುಕ್ (ಇಂಗ್ಲೆಂಡ್): 2011ರಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ ಕೊಹ್ಲಿ ಆಲಿಸ್ಟರ್​ ಕುಕ್​ರನ್ನು ಔಟ್ ಮಾಡಿದ್ದರು. ಇದು ಕೊಹ್ಲಿ ಅವರ ಮೊದಲ ಅಂತಾರಾಷ್ಟ್ರೀಯ ವಿಕೆಟ್ ಆಗಿದೆ.

ಕ್ರೇಗ್ ಕೀಸ್ವೆಟರ್ (ಇಂಗ್ಲೆಂಡ್): ಕುಕ್ ಬಳಿಕ ಕೊಹ್ಲಿಗೆ ಬಲಿಯಾದ ಎರಡನೇ ಬ್ಯಾಟರ್ ಕ್ರೇಗ್ ಕೀಸ್ವೆಟರ್. ಇವರು ಕೂಡ ಇಂಗ್ಲೆಂಡ್​ ತಂಡದವರೆ.

ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದ ಈ ಸೂಪರ್ ಸ್ಟಾರ್ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿಗೆ ಬಲಿಯಾಗಿದ್ದರು.

ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್): ಕಿವೀಸ್ ತಂಡದ ಈ ಸ್ಫೋಟಕ ಬ್ಯಾಟರ್, ಕಿಂಗ್ ಕೊಹ್ಲಿಗೆ ನಾಲ್ಕನೇ ಬಲಿಯಾಗಿದ್ದಾರೆ.

ಕೆವಿನ್ ಪೀಟರ್ಸನ್ (ಇಂಗ್ಲೆಂಡ್): ಟಿ20 ಮಾದರಿಯಲ್ಲಿ ವಿರಾಟ್​ಗೆ ಮೊದಲ ಬಲಿಯಾಗಿದ್ದು ಕೆವಿನ್ ಪೀಟರ್ಸನ್.

ಸಮಿತ್ ಪಟೇಲ್ (ಇಂಗ್ಲೆಂಡ್): ಟಿ20 ಮಾದರಿಯಲ್ಲಿ ವಿರಾಟ್​ಗೆ ಎರಡನೇ ಬಲಿ ಕೂಡ ಇಂಗ್ಲೆಂಡ್ ತಂಡದ್ದೇ ಆಗಿದೆ.

ಮೊಹಮ್ಮದ್ ಹಫೀಜ್ (ಪಾಕಿಸ್ತಾನ): 2012ರ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ, ಈ ಪಾಕ್​ ಬ್ಯಾಟರ್​ಗೆ ಪೆವಿಲಿಯನ್ ದಾರಿ ತೋರಿಸಿದ್ದರು.

ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್): 2014 ರ ಟಿ20 ವಿಶ್ವಕಪ್​ನಲ್ಲಿ ಜಾನ್ಸನ್ ಚಾರ್ಲ್ಸ್ ವಿರಾಟ್ ಕೊಹ್ಲಿ ಬೌಲಿಂಗ್​ನಲ್ಲಿ ಔಟಾಗಿದ್ದರು.

ಸ್ಕಾಟ್ ಎಡ್ವರ್ಡ್ಸ್ (ನೆದರ್ಲೆಂಡ್ಸ್): ನಿನ್ನೆಯ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್, ಕಿಂಗ್ ಕೊಹ್ಲಿಗೆ 9ನೇ ಬಲಿಯಾದರು.

NEXT: ಏಕದಿನದಲ್ಲಿ ಹೆಚ್ಚು ಬಾರಿ 400+ ರನ್ ದಾಖಲಿಸಿದ ತಂಡ ಯಾವುದು ಗೊತ್ತಾ?