ಅಫ್ಘಾನ್ ಆಟಗಾರರಿಗೆ ಸಿಗುವ ಸಂಬಳ ಇಷ್ಟೊಂದು ಕಡಿಮೆನಾ?

27 February 2025

Pic credit: Google

ಪೃಥ್ವಿ ಶಂಕರ

ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಮತ್ತೊಮ್ಮೆ ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ. ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ, ಅಫ್ಘಾನಿಸ್ತಾನ ತಂಡವು ಇಂಗ್ಲೆಂಡ್ ತಂಡವನ್ನು ಸೋಲಿಸಿದೆ.

Pic credit: Google

ಈ ಐತಿಹಾಸಿಕ ಗೆಲುವಿಗೆ ಅಫ್ಘಾನ್ ಆಟಗಾರರನ್ನು ಸಾಕಷ್ಟು ಪ್ರಶಂಸಿಸಲಾಗುತ್ತಿದೆ. ಏತನ್ಮಧ್ಯೆ, ಅಫ್ಘಾನಿಸ್ತಾನ ಆಟಗಾರರು ಎಷ್ಟು ಸಂಬಳ ಪಡೆಯುತ್ತಾರೆ ಎಂಬುದರ ಹುಡುಕಾಟ ಶುರುವಾಗಿದೆ.

Pic credit: Google

ಒಂದು ಏಕದಿನ ಪಂದ್ಯದಿಂದ ಭಾರತೀಯ ಆಟಗಾರರು ಗಳಿಸುವ ಹಣವು ಅಫ್ಘಾನಿಸ್ತಾನ ಆಟಗಾರರು ಒಂದು ವರ್ಷದಲ್ಲಿ ಪಡೆಯುವಷ್ಟು ಹಣ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.

Pic credit: Google

ಭಾರತದ ಪ್ರಥಮ ದರ್ಜೆ ಕ್ರಿಕೆಟಿಗರು ಮತ್ತು ಮಾಜಿ ಕ್ರಿಕೆಟಿಗರು ಪಡೆಯುವ ಪಿಂಚಣಿಗಿಂತ ಕಡಿಮೆ ಹಣವನ್ನು ಅಫ್ಘಾನ್ ಆಟಗಾರರು ಸಂಬಳವಾಗಿ ಪಡೆಯುತ್ತಾರೆ.

Pic credit: Google

ಮಾಧ್ಯಮ ವರದಿಗಳ ಪ್ರಕಾರ, ಅಫ್ಘಾನಿಸ್ತಾನದ ಸ್ಟಾರ್ ಆಟಗಾರರು ತಿಂಗಳಿಗೆ ಸುಮಾರು 58 ಸಾವಿರ ರೂ. ವೇತನ ಪಡೆಯುತ್ತಾರೆ.

Pic credit: Google

ಇದರ ಪ್ರಕಾರ ತಂಡದ ಸ್ಟಾರ್ ಆಟಗಾರರಿಗೆ ವರ್ಷಕ್ಕೆ ಸುಮಾರು 6 ಲಕ್ಷ ರೂಪಾಯಿಗಳು ವೇತನದ ರೂಪದಲ್ಲಿ ಸಿಗುತ್ತದೆ.

Pic credit: Google

ಆದರೆ ಯುವ ಮತ್ತು ಹೊಸ ಆಟಗಾರರು ತಿಂಗಳಿಗೆ 32 ರಿಂದ 48 ಸಾವಿರ ರೂ. ವೇತನ ಪಡೆಯುತ್ತಾರೆ. ಅಂದರೆ ಅವರ ವಾರ್ಷಿಕ ಆದಾಯ 4 ರಿಂದ 5 ಲಕ್ಷ ರೂಪಾಯಿಗಳಷ್ಟಿದೆ.

Pic credit: Google

ಇತ್ತ ಟೀಂ ಇಂಡಿಯಾ ಆಟಗಾರರು ಪಂದ್ಯ ಶುಲ್ಕವಾಗಿಯೇ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ., ಟಿ20 ಪಂದ್ಯಕ್ಕೆ 3 ಲಕ್ಷ ರೂ., ಹಾಗೂ ಏಕದಿನ ಪಂದ್ಯಕ್ಕೆ 6 ಲಕ್ಷ ರೂಗಳನ್ನು ಪಡೆಯುತ್ತಾರೆ.

Pic credit: Google