ಇತಿಹಾಸ ನಿರ್ಮಿಸಿದ ಅಜಿಂಕ್ಯ ರಹಾನೆ

14 December 2024

Pic credit: Google

ಪೃಥ್ವಿ ಶಂಕರ

ಟೀಂ ಇಂಡಿಯಾ ಕ್ರಿಕೆಟಿಗ ಅಜಿಂಕ್ಯ ರಹಾನೆ ಪ್ರಸ್ತುತ ದೇಶಿ ಕ್ರಿಕೆಟ್​ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಆಡುತ್ತಿದ್ದಾರೆ.

Pic credit: Google

ಈ ಟ್ರೋಫಿಯಲ್ಲಿ ಬರೋಡಾ ವಿರುದ್ಧ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಅಜಿಂಕ್ಯ ರಹಾನೆ 98 ರನ್‌ಗಳ ಇನಿಂಗ್ಸ್‌ ಆಡಿದರು.

Pic credit: Google

ರಹಾನೆ ಅವರ ಈ ಸ್ಫೋಟಕ ಇನ್ನಿಂಗ್ಸ್​ನ ಆದಾರದ ಮೇಲೆ ಮುಂಬೈ ತಂಡ 6 ವಿಕೆಟ್‌ಗಳಿಂದ ಗೆದ್ದು ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು.

Pic credit: Google

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಜಿಂಕ್ಯ ರಹಾನೆ ಸತತ ಮೂರನೇ ಬಾರಿ ಶತಕ ವಂಚಿತರಾದರು. ಆದರೂ ಅವರು ಈ ಇನ್ನಿಂಗ್ಸ್ ಮೂಲಕ ದೊಡ್ಡ ದಾಖಲೆ ಕೂಡ ನಿರ್ಮಿಸಿದರು.

Pic credit: Google

ಅಜಿಂಕ್ಯ ರಹಾನೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಒಂದೇ ಸೀಸನ್​ನಲ್ಲಿ ಐದು ಅರ್ಧಶತಕಗಳನ್ನು ಗಳಿಸಿದ ಮೊದಲ ಮುಂಬೈ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

Pic credit: Google

ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿ ಅಜಿಂಕ್ಯ ರಹಾನೆ ಆಡಿರುವ 8 ಪಂದ್ಯಗಳಲ್ಲಿ 432 ರನ್ ಗಳಿಸಿದ್ದಾರೆ. ಈ ಮೂಲಕ ಈ ಟೂರ್ನಿಯಲ್ಲಿ ಅಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

Pic credit: Google

ಅಲ್ಲದೆ ಈ ಪಂದ್ಯಾವಳಿಯಲ್ಲಿ ರಹಾನೆ 19 ಸಿಕ್ಸರ್‌ಗಳನ್ನು ಹೊಡೆದಿರುವುದು ಮಾತ್ರವಲ್ಲದೆ ಅವರ ಸ್ಟ್ರೈಕ್ ರೇಟ್ ಕೂಡ 170 ರ ಆಸುಪಾಸಿನಲ್ಲಿದೆ.

Pic credit: Google