ಕೋಟ್ಯಾಂತರು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಇಂದಿನಿಂದ ಆರಂಭವಾಗಿದೆ.
05 Oct 2023
Pic credit - instagram
ಲೀಗ್ನ ಮೊದಲ ಪಂದ್ಯ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಕಳೆದ ಬಾರಿಯ ರನ್ನರ್ ಅಪ್ ನ್ಯೂಜಿಲೆಂಡ್ ನಡುವೆ ನಡೆಯುತ್ತಿದೆ.
ಪಂದ್ಯ ಶುರು
Pic credit - instagram
ಇನ್ನು ಈ ಬಾರಿಯ ವಿಶ್ವಕಪ್ ಹಲವು ವಿಷೇತಗಳಿಂದ ಎಲ್ಲರ ಗಮನ ಸೆಳೆಯುತ್ತಿದ್ದು, ಇದರಲ್ಲಿ ಕೆಲವು ಪ್ರಮುಖ ನಿಯಮಗಳ ಬದಲಾವಣೆಯೂ ಸೇರಿದೆ.
ನಿಯಮ ಬದಲಾವಣೆ
ವಿಶ್ವಕಪ್ ಇತಿಹಾಸದಲ್ಲಿ ಮೊದಲ ಭಾರಿಗೆ ಭಾರತ ಏಕಾಂಗಿಯಾಗಿ ಈ ಮೆಗಾ ಈವೆಂಟ್ ಅನ್ನು ಆಯೋಜಿಸುತ್ತಿದೆ
ಭಾರತದ ಆತಿಥ್ಯ
ಏಕದಿನ ವಿಶ್ವಕಪ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೆರಿಬಿಯನ್ ತಂಡ ಈ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ವಿಂಡೀಸ್ ತಂಡವಿಲ್ಲ
ಈ ಬಾರಿ ಬೌಂಡರಿ ಎಣಿಕೆ ನಿಯಮ ಇರುವುದಿಲ್ಲ. ಹೀಗಾಗಿ ಪಂದ್ಯ ಟೈ ಆದರೆ ಫಲಿತಾಂಶ ಬರುವವೆರಗೂ ಸೂಪರ್ ಓವರ್ ಆಡಿಸಲಾಗುತ್ತದೆ.
ಬೌಂಡರಿ ಎಣಿಕೆ ನಿಯಮ
ಈ ಹಿಂದೆ ಪಂದ್ಯ ಸೂಪರ್ ಓವರ್ನಲ್ಲಿಯೂ ಟೈ ಆದರೆ ಯಾವ ತಂಡ ಹೆಚ್ಚ ಬೌಂಡರಿ ಬಾರಿಸಿತ್ತೋ ಆ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತಿತ್ತು. ಈ ನಿಯಮದಡಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿತ್ತು
ಇಂಗ್ಲೆಂಡ್ ಚಾಂಪಿಯನ್
ಬೌಂಡರಿಯ ಸುತ್ತಳತೆ 70 ಮೀಟರ್ಗಿಂತ ಕಡಿಮೆ ಇರುವಂತಿಲ್ಲ. ಪಿಚ್ನಲ್ಲಿ ಹುಲ್ಲು ಇರಬೇಕು.
ಬೌಂಡರಿ ಸುತ್ತಳತೆ
ಈ ಮೊದಲು ಆನ್‌ಫೀಲ್ಡ್ ಅಂಪೈರ್, 3ನೇ ಅಂಪೈರ್ನ ಮೊರೆ ಹೋದಾಗ ಸಾಫ್ಟ್ ಸಿಗ್ನಲ್ ನಿಯಮದಡಿ ತಮ್ಮ ನಿರ್ಧಾರ ತಿಳಿಸುತ್ತಿದ್ದರು. ಆದರೀಗ ಆ ನಿಯಮಕ್ಕೆ ಬ್ರೇಕ್ ಹಾಕಲಾಗಿದೆ.