ಇದ್ದಕ್ಕಿದ್ದಂತೆ ತಂಡದಿಂದ ಹೊರಬಿದ್ದ ಅರ್ಜುನ್ ತೆಂಡೂಲ್ಕರ್
23 January 2025
Pic credit: Google
ಪೃಥ್ವಿ ಶಂಕರ
ರಣಜಿ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಬಿಗ್ ಶಾಕ್ ಎದುರಾಗಿದೆ.
Pic credit: Google
ರಣಜಿ ಟ್ರೋಫಿ ಪ್ಲೇಟ್ ಫೈನಲ್‌ನಲ್ಲಿ ಗೋವಾ ತಂಡ ಅರ್ಜುನ್ ತೆಂಡೂಲ್ಕರ್ ಅವರನ್ನು ತಂಡದಿಂದ ಕೈಬಿಟ್ಟಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ.
Pic credit: Google
ಈ ಹಿಂದಿನ ಪಂದ್ಯದಲ್ಲಿ ನಾಗಾಲ್ಯಾಂಡ್ ವಿರುದ್ಧ ಅರ್ಜುನ್ ತೆಂಡೂಲ್ಕರ್ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು, ಇದರ ಹೊರತಾಗಿಯೂ ಅವರಿಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ.
Pic credit: Google
ಅರ್ಜುನ್ ತೆಂಡೂಲ್ಕರ್ ಈ ಬಾರಿಯ ರಣಜಿ ಋತುವಿನಲ್ಲೂ ಉತ್ತಮ ಬೌಲಿಂಗ್ ಮಾಡಿದ್ದು, ಆಡಿರುವ 4 ಪಂದ್ಯಗಳಲ್ಲಿ ಒಟ್ಟು 16 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
Pic credit: Google
ಇಂತಹ ಉತ್ತಮ ಪ್ರದರ್ಶನದ ಹೊರತಾಗಿಯೂ ಅರ್ಜುನ್ ತೆಂಡೂಲ್ಕರ್ ಅವರನ್ನು ರಣಜಿ ಟ್ರೋಫಿ ಪ್ಲೇಟ್ ಫೈನಲ್‌ನಿಂದ ಹೊರಗಿಡಲಾಗಿದೆ. ಇದು ನಿಜವಾಗಿಯೂ ಆಶ್ಚರ್ಯಕರವಾಗಿದೆ.
Pic credit: Google
ಪ್ಲೇಟ್ ಫೈನಲ್‌ನಲ್ಲಿ ನಾಗಾಲ್ಯಾಂಡ್ ವಿರುದ್ಧ ಗೋವಾ ಮೊದಲ ದಿನ 7 ವಿಕೆಟ್‌ಗೆ 258 ರನ್ ಗಳಿಸಿದೆ. ಸುಯಶ್ ಪ್ರಭುದೇಸಾಯಿ ಸೇರಿದಂತೆ ಒಟ್ಟು 3 ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಗಳಿಸಿದ್ದಾರೆ.