ಬುಮ್ರಾ ಬಳಿ ಇದ್ದ ನಂ.1 ಪಟ್ಟವನ್ನು ಕಸಿದುಕೊಂಡ ಅರ್ಷದೀಪ್ ಸಿಂಗ್

14 November 2024

Pic credit: Google

ಪೃಥ್ವಿ ಶಂಕರ

Pic credit: Google

2022 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್  ಪ್ರಸ್ತುತ ಟಿ20 ಮಾದರಿಯಲ್ಲಿ ಭಾರತದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.

Pic credit: Google

Pic credit: Google

ಅರ್ಷದೀಪ್ ಸಿಂಗ್ ಇದುವರೆಗೆ ಭಾರತದ ಪರ 59 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, ತಮ್ಮ ಗಮನಾರ್ಹ ಪ್ರದರ್ಶನದ ಮೂಲಕ ದಾಖಲೆ ಬರೆದಿದ್ದಾರೆ. ಅಲ್ಲದೆ ಜಸ್ಪ್ರೀತ್ ಬುಮ್ರಾ ಅವರನ್ನು ಸಹ ಹಿಂದಿಕ್ಕಿದ್ದಾರೆ.

Pic credit: Google

Pic credit: Google

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ರಿಯಾನ್ ರಿಕಲ್ಟನ್ ವಿಕೆಟ್ ಪಡೆಯುವ ಮೂಲಕ ಅರ್ಷದೀಪ್ ಸಿಂಗ್, ಟಿ20ಐ ಕ್ರಿಕೆಟ್‌ನಲ್ಲಿ ತಮ್ಮ 90 ವಿಕೆಟ್‌ಗಳನ್ನು ಪೂರೈಸಿದರು.

Pic credit: Google

Pic credit: Google

ಈ ಮೂಲಕ ಅರ್ಷದೀಪ್, ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿದರು. ಟಿ20 ಕ್ರಿಕೆಟ್‌ನಲ್ಲಿ ಬುಮ್ರಾ ಇದುವರೆಗೆ 89 ವಿಕೆಟ್‌ಗಳನ್ನು ಪಡೆದಿದ್ದಾರೆ.

Pic credit: Google

Pic credit: Google

ಇದರೊಂದಿಗೆ ಅರ್ಷದೀಪ್ ಸಿಂಗ್ ಟಿ20ಐ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ನಂಬರ್-1 ವೇಗದ ಬೌಲರ್ ಎನಿಸಿಕೊಂಡಿದ್ದಾರೆ.

Pic credit: Google

Pic credit: Google

ಇನ್ನು ಟಿ20ಐ ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಭಾರತದ ಬೌಲರ್​ಗಳ ಪೈಕಿ ಯುಜುವೇಂದ್ರ ಚಾಹಲ್ ಮೊದಲ ಸ್ಥಾನದಲ್ಲಿದ್ದು, ಅವರು ಇದುವರೆಗೆ 96 ವಿಕೆಟ್ ಪಡೆದಿದ್ದಾರೆ.

Pic credit: Google

Pic credit: Google

ಅರ್ಷದೀಪ್ ಸಿಂಗ್ ಭಾರತ ಪರ ಇದುವರೆಗೆ 59 ಟಿ20 ಪಂದ್ಯಗಳನ್ನು ಹಾಗೂ 8 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಏಕದಿನ ಪಂದ್ಯಗಳಲ್ಲಿ ಅರ್ಷದೀಪ್ ಸಿಂಗ್ ಒಟ್ಟು 12 ವಿಕೆಟ್ ಪಡೆದಿದ್ದಾರೆ.

Pic credit: Google