ಏಷ್ಯನ್ ಚಾಂಪಿಯನ್ ಭಾರತ ಹಾಕಿ ತಂಡಕ್ಕೆ ಬಹುಮಾನ ಘೋಷಣೆ

17 september 2024

Pic credit: Google

ಪೃಥ್ವಿ ಶಂಕರ

Pic credit: Google

ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ಹಾಕಿ ತಂಡ ಚೀನಾವನ್ನು 1-0 ಗೋಲುಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಭಾರತ ದಾಖಲೆಯ 5ನೇ ಬಾರಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದುಕೊಂಡಿತು.

Pic credit: Google

ಇದೀಗ ಹಾಕಿ ಇಂಡಿಯಾ, ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಟೀಂ ಇಂಡಿಯಾಗೆ ಬಹುಮಾನವಾಗಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಬಹುಮಾನದ ಹಣವನ್ನು ಘೋಷಿಸಿದೆ.

Pic credit: Google

ಅದರಂತೆ ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನಿಗೆ ಹಾಕಿ ಇಂಡಿಯಾ 3 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಿದೆ. ಇದಲ್ಲದೇ ಸಹಾಯಕ ಸಿಬ್ಬಂದಿಗೆ 1.5 ಲಕ್ಷ ರೂ. ಬಹುಮಾನ ಸಿಗಲಿದೆ.

Pic credit: Google

ಮೊದಲ ಸ್ಥಾನ ಪಡೆದ ಟೀಂ ಇಂಡಿಯಾಗೆ ಏಷ್ಯನ್ ಹಾಕಿ ಫೆಡರೇಶನ್‌ನಿಂದ ಚಿನ್ನದ ಪದಕದೊಂದಿಗೆ ಚಾಂಪಿಯನ್ಸ್ ಟ್ರೋಫಿ ಮತ್ತು ಬಹುಮಾನದ ಮೊತ್ತವನ್ನು ನೀಡಲಾಯಿತು.

Pic credit: Google

ಈ ವೇಳೆ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಟೂರ್ನಿಯ ಸ್ಟಾರ್ ಪರ್ಫಾರ್ಮರ್ ಎನಿಸಿಕೊಂಡಿದಲ್ಲದೆ, ಪಂದ್ಯಾವಳಿಯ ಆಟಗಾರನಾಗಿಯೂ ಆಯ್ಕೆಯಾದರು. ಜೊತೆಗೆ ಬಹುಮಾನವಾಗಿ 2 ಸಾವಿರ ಯುಎಸ್ ಡಾಲರ್ ನಗದು ಬಹುಮಾನವನ್ನು ಪಡೆದರು.

Pic credit: Google

ಹರ್ಮನ್‌ಪ್ರೀತ್ ಸಿಂಗ್ ಇಡೀ ಪಂದ್ಯಾವಳಿಯಲ್ಲಿ 7 ಗೋಲು ಗಳಿಸುವ ಮೂಲಕ ಭಾರತದ ಪರ ಅಗ್ರ ಸ್ಕೋರರ್ ಎನಿಸಿಕೊಂಡರು. ಹೀಗಾಗಿಯೇ ಅವರಿಗೆ ಹೀರೋ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಲಭಿಸಿತು.

Pic credit: Google

ಫೈನಲ್​ನಲ್ಲಿ ಭಾರತದ ಎದುರು ಸೋತ ಆತಿಥೇಯ ಚೀನಾ ತಂಡ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದುಕೊಂಡಿತು.

Pic credit: Google

ಇದಲ್ಲದೇ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಸೋಲಿಸಿ ನೆರೆಯ ರಾಷ್ಟ್ರ ಪಾಕಿಸ್ತಾನ ಮೂರನೇ ಸ್ಥಾನವನ್ನು ವಶಪಡಿಸಿಕೊಂಡಿದೆ.