ಏಷ್ಯನ್ ಗೇಮ್ಸ್​ನಲ್ಲಿ ಪಾಕಿಸ್ತಾನದ ಮಹಿಳಾ ಹಾಗೂ ಪುರುಷ ಎರಡೂ ಕ್ರಿಕೆಟ್​ ತಂಡಗಳು ಪದಕವಿಲ್ಲದೆ ಟೂರ್ನಿ ಮುಗಿಸಿವೆ.

07 October 2023

ಚಿನ್ನದ ಪದಕ ಗೆಲ್ಲುವ ಗುರಿಯೊಂದಿಗೆ ಏಷ್ಯನ್ ಗೇಮ್ಸ್​ಗೆ ಎಂಟ್ರಿಕೊಟ್ಟಿದ್ದ ಪಾಕ್ ಕ್ರಿಕೆಟ್ ತಂಡಕ್ಕೆ ಕಂಚಿನ ಪದಕವೂ ಲಭಿಸಲಿಲ್ಲ.

ಇಂದು ನಡೆದ ಕಂಚಿನ ಪದಕದ ಪಂದ್ಯದಲ್ಲಿ ಪಾಕ್ ತಂಡವನ್ನು ಮಣಿಸುವಲ್ಲಿ ಬಾಂಗ್ಲಾ ತಂಡ ಯಶಸ್ವಿಯಾಗಿದೆ.

ಮಳೆ ಪೀಡಿತ ಈ ಪಂದ್ಯವನ್ನು ಕೇವಲ 5 ಓವರ್​ಗಳಿಗೆ ಸೀಮಿತಗೊಳಿಸಲಾಯಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡ 1 ವಿಕೆಟ್ ಕಳೆದುಕೊಂಡು 48 ರನ್ ಕಲೆಹಾಕಿತು

ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ 5 ವಿಕೆಟ್ ಕಳೆದುಕೊಂಡು ಕೊನೆಯ ಓವರ್​ನಲ್ಲಿ ಗೆಲುವಿನ ನಗೆ ಬೀರಿತು.

ಪುರುಷರ ತಂಡದಂತೆ ಮಹಿಳಾ ತಂಡ ಕೂಡ ಈ ಬಾರಿಯ ಏಷ್ಯನ್ ಗೇಮ್ಸ್​ನಲ್ಲಿ ಯಾವುದೇ ಪದಕವಿಲ್ಲದೆ ಖಾಲಿ ಕೈಯಲ್ಲಿ ವಾಪಸ್ಸಾಯಿತು.