ನೆದರ್ಲೆಂಡ್ಸ್ ತಂಡವನ್ನು ಮಣಿಸುವ ಮೂಲಕ ಪಾಕಿಸ್ತಾನ ವಿಶ್ವಕಪ್​ನಲ್ಲಿ ಶುಭಾರಂಭ ಮಾಡಿದೆ.

07 October 2023

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ 81 ರನ್​ಗಳ ಸೋಲುಭವಿಸಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 286 ರನ್ ಕಲೆಹಾಕಿತು.

ಈ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡದ 205 ರನ್ ಗಳಿಸಲಷ್ಟೇ ಶಕ್ತವಾಯಿತು.

ಇನ್ನು ಈ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ವಿಫಲರಾದ ಬಾಬರ್, ನಾಯಕನಾಗಿ ಭಾರತದ ನೆಲದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

ಅದೆನೆಂದರೆ ಏಕದಿನ ವಿಶ್ವಕಪ್ ಇತಿಹಾದಲ್ಲಿ ಭಾರತದಲ್ಲಿ ಪಾಕ್ ತಂಡದ ಮೊದಲ ಗೆಲುವು ಇದಾಗಿದೆ.

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ 81 ರನ್​ಗಳ ಸೋಲುಭವಿಸಿತು.

ಈ ಮೂಲಕ ನಾಯಕನಾಗಿ ವಿಶ್ವಕಪ್​ನಲ್ಲಿ ತಂಡವನ್ನು ಗೆಲುವಿಗೆ ಮುನ್ನಡೆಸಿದ ಶ್ರೇಯ ಬಾಬರ್ ಆಝಂಗೆ ಸಲ್ಲುತ್ತದೆ.

ಈ ಮೊದಲು ಪಾಕ್ ತಂಡ 1996 ಮತ್ತು 2011 ರ ವಿಶ್ವಕಪ್​ನಲ್ಲಿ ಭಾರತದಲ್ಲಿ ಎರಡು ಪಂದ್ಯಗಳನ್ನು ಮಾತ್ರ ಆಡಿತ್ತು. ಆದರೆ ಆ ಎರಡೂ ಪಂದ್ಯಗಳಲ್ಲೂ ಪಾಕ್ ತಂಡಕ್ಕೆ ಗೆಲ್ಲಲು ಸಾಧ್ಯವಾಗಿರಲಿಲ್ಲ.