ಏಕದಿನ ವಿಶ್ವಕಪ್‌ನ ಫೈನಲ್‌ ಪಂದ್ಯದಲ್ಲಿ ಶತಕ ಬಾರಿಸಿದ ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

17 November 2023

ಕ್ಲೈವ್ ಲಾಯ್ಡ್ 1975ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 102 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ವಿವ್ ರಿಚರ್ಡ್ಸ್ 1979 ರ ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 138 ರನ್ ಸಿಡಿಸಿದ್ದರು.

ಅರವಿಂದ ಡಿ ಸಿಲ್ವಾ 1996ರ ವಿಶ್ವಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 107 ರನ್ ಬಾರಿಸಿದ್ದರು.

ರಿಕಿ ಪಾಂಟಿಂಗ್ 2003ರ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತದ ವಿರುದ್ಧ 140 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು.

ಆಡಮ್ ಗಿಲ್‌ಕ್ರಿಸ್ಟ್ 2007 ರ ವಿಶ್ವಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 149 ರನ್ ಸಿಡಿಸಿದ್ದರು.

ಮಹೇಲ ಜಯವರ್ಧನೆ 2011ರ ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತದ ವಿರುದ್ಧ ಅಜೇಯ 103 ರನ್ ಬಾರಿದ್ದರು.

ಈ ಬಾರಿಯ ಏಕದಿನ ವಿಶ್ವಕಪ್‌ನ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ.

ಹೀಗಾಗಿ ಅದ್ಭುತ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಶತಕ ಬಾರಿಸಿ ದಾಖಲೆ ಬರೆಯಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

NEXT: ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ಬಾರಿ ಫೈನಲ್ ಸೋತ ತಂಡ ಯಾವುದು ಗೊತ್ತಾ?