ಸೆಹ್ವಾಗ್ ವಿಶ್ವ ದಾಖಲೆ ಮುರಿದ ಬೆನ್ ಡಕೆಟ್

16 october 2024

Pic credit: Google

ಪೃಥ್ವಿ ಶಂಕರ

Pic credit: Google

ಪಾಕಿಸ್ತಾನ ವಿರುದ್ಧದ ಮುಲ್ತಾನ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕ ಆಟಗಾರ ಬೆನ್ ಡಕೆಟ್ ಅದ್ಭುತ ಶತಕ ಸಿಡಿಸಿದ್ದಾರೆ.

Pic credit: Google

ಪಾಕ್ ವಿರುದ್ಧ 114 ರನ್​ಗಳ ಇನ್ನಿಂಗ್ಸ್ ಆಡಿದ ಬೆನ್ ಡಕೆಟ್ ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ನಾಲ್ಕನೇ ಶತಕವಾಗಿದೆ. ಅಲ್ಲದೆ ಇದು ಪಾಕಿಸ್ತಾನದ ವಿರುದ್ಧ ಅವರ ಎರಡನೇ ಶತಕವಾಗಿದೆ.

Pic credit: Google

ಈ ಶತಕದೊಂದಿಗೆ ಡಕೆಟ್ 2000 ಟೆಸ್ಟ್ ರನ್‌ಗಳನ್ನು ಪೂರೈಸಿದರು. ಈ ಮೂಲಕ ವೀರೇಂದ್ರ ಸೆಹ್ವಾಗ್ ಅವರ ವಿಶ್ವ ದಾಖಲೆಯನ್ನು ಸಹ ಮುರಿದರು.

Pic credit: Google

ಟೆಸ್ಟ್‌ನಲ್ಲಿ 87 ಸ್ಟ್ರೈಕ್ ರೇಟ್‌ನಲ್ಲಿ 2000 ರನ್ ಪೂರೈಸಿದ ಡಕೆಟ್, 83.47 ರ ಸ್ಟ್ರೈಕ್ ರೇಟ್​ನಲ್ಲಿ 2000 ರನ್ ಪೂರೈಸಿದ ಸೆಹ್ವಾಗ್ ಅವರನ್ನು ಹಿಂದಿಕ್ಕಿದ್ದಾರೆ.

Pic credit: Google

2016 ರಲ್ಲಿ ಇಂಗ್ಲೆಂಡ್‌ ಪರ ಪಾದಾರ್ಪಣೆ ಮಾಡಿದ್ದ ಬೆನ್ ಡಕೆಟ್ 6 ವರ್ಷಗಳ ಕಾಲ ತಂಡದಿಂದ ಹೊರಗುಳಿದಿದ್ದರು. ಆ ಬಳಿಕ 2022 ರಲ್ಲಿ ಮತ್ತೆ ತಂಡದಲ್ಲಿ ಅವಕಾಶ ಪಡೆದ ಡಕೆಟ್ 50 ರ ಸರಾಸರಿಯಲ್ಲಿ 4 ಶತಕ ಸಿಡಿಸಿದ್ದಾರೆ.

Pic credit: Google

ಡಕೆಟ್ ಅವರ ಶತಕದಲ್ಲಿ ಅಚ್ಚರಿಯ ಸಂಗತಿಯೆಂದರೆ, ಸಿಡಿದಿರುವ 4 ಶತಕಗಳಲ್ಲಿ 3 ಶತಕಗಳು ಏಷ್ಯಾ ನೆಲದಲ್ಲೇ ಬಂದಿವೆ.