46 ಸಾವಿರ ಕೋಟಿ ಮೌಲ್ಯದ ತಂಡ ಖರೀದಿಸಲು ಎಲಾನ್ ಮಸ್ಕ್ ಆಸಕ್ತಿ
10 January 2025
Pic credit: Google
ಪೃಥ್ವಿ ಶಂಕರ
ಅಮೆರಿಕದ ಉದ್ಯಮಿ ಹಾಗೂ ಪ್ರಸ್ತುತ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಆಪ್ತಮಿತ್ರ ಎಲಾನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ.
Pic credit: Google
ಎಲಾನ್ ಮಸ್ಕ್ ಸ್ಪೇಸ್‌ಎಕ್ಸ್, ಟೆಸ್ಲಾ ಮತ್ತು ಎಕ್ಸ್‌ನಂತಹ ದೊಡ್ಡ ಕಂಪನಿಗಳ ಮಾಲೀಕರಾಗಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ, ಎಲೋನ್ ಮಸ್ಕ್ ಅವರ ನಿವ್ವಳ ಮೌಲ್ಯ 437 ಬಿಲಿಯನ್ ಡಾಲರ್.
Pic credit: Google
ಎಲಾನ್ ಮಸ್ಕ್ಗೆ ಉದ್ಯಮದ ಹೊರತಾಗಿ ಕ್ರೀಡೆಯ ಮೇಲು ಆಸಕ್ತಿ ಇದ್ದು, ಇದಕ್ಕೆ ಪೂರಕವಾಗಿ ಇದೀಗ ಅವರು ಇಂಗ್ಲೆಂಡ್‌ನ ಪ್ರಸಿದ್ಧ ಲಿವರ್‌ಪೂಲ್ ತಂಡವನ್ನು ಖರೀದಿಸಲು ಯೋಚಿಸುತ್ತಿದ್ದಾರೆ.
Pic credit: Google
ಎಲಾನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಸಂದರ್ಶನವೊಂದರಲ್ಲಿ ತಮ್ಮ ಮಗ ಲಿವರ್‌ಪೂಲ್ ತಂಡವನ್ನು ಖರೀದಿಸಲು ಆಸಕ್ತಿ ಹೊಂದಿದ್ದಾನೆ ಎಂದು ಬಹಿರಂಗಪಡಿಸಿದ್ದಾರೆ.
Pic credit: Google
ಈ ಬಗ್ಗೆ ಮುಂದುವರೆದು ಮಾತನಾಡಿರುವ ಮಸ್ಕ್ ಅವರ ತಂದೆ, ನನ್ನ ಕುಟುಂಬದ ಮೂಲ ಲಿವರ್‌ಪೂಲ್ ಆಗಿದೆ. ಅನೇಕ ಸಂಬಂಧಿಕರು ಲಿವರ್‌ಪೂಲ್‌ನಲ್ಲಿ ವಾಸಿಸುತ್ತಿದ್ದಾರೆ. ಅದಕ್ಕಾಗಿಯೇ ಈ ಕ್ಲಬ್ ಜೊತೆ ವಿಶೇಷ ಬಾಂಧವ್ಯವಿದೆ ಎಂದಿದ್ದಾರೆ.
Pic credit: Google
ವರದಿಯ ಪ್ರಕಾರ, ಲಿವರ್‌ಪೂಲ್ ನಾಲ್ಕನೇ ಅತ್ಯಂತ ಮೌಲ್ಯಯುತ ಕ್ಲಬ್ ಆಗಿದ್ದು, ಇದರ ಪ್ರಸ್ತುತ ಮೌಲ್ಯ 4.3 ಬಿಲಿಯನ್ ಪೌಂಡ್ ಅಂದರೆ ಸುಮಾರು 46 ಸಾವಿರ ಕೋಟಿ ರೂಪಾಯಿ.
Pic credit: Google
ಪ್ರಸ್ತುತ, ಲಿವರ್‌ಪೂಲ್ ಫೆನ್ವೇ ಸ್ಪೋರ್ಟ್ಸ್ ಗ್ರೂಪ್ (FSG) ಒಡೆತನದಲ್ಲಿದ್ದು, 2010 ರಲ್ಲಿ ಲಿವರ್‌ಪೂಲ್ ತಂಡವನ್ನು 300 ಮಿಲಿಯನ್ ಪೌಂಡ್‌ಗಳಿಗೆ ಅಂದರೆ ಸುಮಾರು 3200 ಕೋಟಿಗಳಿಗೆ ಖರೀದಿಸಿತ್ತು.