ಪವರ್‌ಪ್ಲೇನಲ್ಲಿ ಹೆಚ್ಚು ವಿಕೆಟ್‌ ಉರುಳಿಸಿದ ವೇಗಿಗಳಲ್ಲಿ ಭಾರತೀಯನಿಗೆ ಅಗ್ರಸ್ಥಾನ

26 January 2025

Pic credit: Google

ಪೃಥ್ವಿ ಶಂಕರ

ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಮೊದಲ ಟಿ20ಯಲ್ಲಿ ಏಳು ವಿಕೆಟ್‌ಗಳ ಜಯ ಸಾಧಿಸಿದ ಭಾರತ, ಎರಡನೇ ಟಿ20 ಪಂದ್ಯವನ್ನು ಗೆದ್ದುಕೊಂಡಿದೆ.

Pic credit: Google

ಎರಡನೇ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡವನ್ನು 165 ರನ್‌ಗಳಿಗೆ ಕಟ್ಟಿಹಾಕಿದರು.

Pic credit: Google

ಮತ್ತೊಮ್ಮೆ ಮ್ಯಾಜಿಕ್ ಮಾಡಿದ ಅರ್ಷದೀಪ್ ಸಿಂಗ್ ಮೊದಲ ಓವರ್​ನಲ್ಲೇ ಫಿಲ್ ಸಾಲ್ಟ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದ್ದರು. ಅವರು ಪವರ್‌ಪ್ಲೇ ಅಂದರೆ ಮೊದಲ ಆರು ಓವರ್‌ಗಳಲ್ಲಿ ಅದ್ಭುತವಾಗಿ ಬೌಲ್ ಮಾಡಿದರು.

Pic credit: Google

ಈ ಮೂಲಕ ಅರ್ಷದೀಪ್ ಸಿಂಗ್ 2023 ರಿಂದ ಇಲ್ಲಿಯವರೆಗೆ ಪವರ್‌ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಉರುಳಿಸಿದ ವೇಗಿ ಎನಿಸಿಕೊಂಡಿದ್ದಾರೆ.

Pic credit: Google

2023 ರಿಂದ ಇಲ್ಲಿಯವರೆಗೆ, ಅರ್ಷದೀಪ್ ಪವರ್‌ಪ್ಲೇನಲ್ಲಿ 28 ವಿಕೆಟ್‌ಗಳನ್ನು ಪಡೆದಿದ್ದು, ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Pic credit: Google

ಪವರ್‌ಪ್ಲೇನಲ್ಲಿ ಅರ್ಷದೀಪ್ ಉರುಳಿಸಿರುವ 28 ವಿಕೆಟ್​ಗಳಲ್ಲಿ 17 ಬಲಗೈ ಬ್ಯಾಟ್ಸ್‌ಮನ್‌ಗಳಿದ್ದರೆ, ಎಡಗೈ ಬ್ಯಾಟ್ಸ್‌ಮನ್‌ಗಳ 11 ವಿಕೆಟ್ ಪಡೆದಿದ್ದಾರೆ.

Pic credit: Google

ಹೊಸ ಬಾಲ್ ಮಾತ್ರವಲ್ಲ, ಡೆತ್ ಓವರ್‌ಗಳಲ್ಲಿಯೂ ಅರ್ಶ್‌ದೀಪ್ ಅದ್ಭುತವಾಗಿ ಬೌಲ್ ಮಾಡುತ್ತಾರೆ. ಇದೇ ಕಾರಣಕ್ಕೆ ಅವರನ್ನೂ ಚಾಂಪಿಯನ್ಸ್ ಟ್ರೋಫಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

Pic credit: Google