ಹೀಗಾದರೆ ಪಾಕಿಸ್ತಾನದ ಹೆಸರಿರುವ ಕೋಟ್ ಧರಿಸಲೇಬೇಕು ಟೀಂ ಇಂಡಿಯಾ
15 January 2025
Pic credit: Google
ಪೃಥ್ವಿ ಶಂಕರ
ಚಾಂಪಿಯನ್ಸ್ ಟ್ರೋಫಿಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ಪಂದ್ಯಾವಳಿ ಫೆಬ್ರವರಿ 19 ರಿಂದ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ.
Pic credit: Google
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಐಸಿಸಿ ಈ ಪಂದ್ಯಾವಳಿಯ ಕೋಟ್ ಅನ್ನು ಬಿಡುಗಡೆ ಮಾಡಿದ್ದು, ಪಂದ್ಯಾವಳಿಯಲ್ಲಿ ಗೆದ್ದ ತಂಡದ ಆಟಗಾರರು ಈ ಕೋಟ್ ಅನ್ನು ಧರಿಸುತ್ತಾರೆ.
Pic credit: Google
ಚಾಂಪಿಯನ್ಸ್ ಟ್ರೋಫಿಯ ವಿಜೇತ ತಂಡದ ಆಟಗಾರರಿಗೆ ಬಿಳಿ ಕೋಟ್ ನೀಡಲಾಗುತ್ತದೆ. 2013ರಲ್ಲಿ ಭಾರತದ ಆಟಗಾರರು ಇದೇ ಕೋಟ್ ಧರಿಸಿದ್ದರು.
Pic credit: Google
ಈ ಬಾರಿಯೂ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಟೀಂ ಇಂಡಿಯಾ ದೊಡ್ಡ ಸ್ಪರ್ಧಿಯಾಗಿದ್ದು, ಒಂದು ವೇಳೆ ತಂಡವು ಚಾಂಪಿಯನ್ ಆದರೆ, ಎಲ್ಲಾ ಆಟಗಾರರು ಮತ್ತೆ ಬಿಳಿ ಕೋಟ್ ಧರಿಸಲಿದ್ದಾರೆ.
Pic credit: Google
ಇಲ್ಲಿ ಕುತೂಹಲಕಾರಿ ಅಂಶವೆಂದರೆ ಐಸಿಸಿ ಬಿಡುಗಡೆ ಮಾಡಿರುವ ಕೋಟ್ ಮೇಲೆ ಪಾಕಿಸ್ತಾನದ ಹೆಸರನ್ನು ನಮೂದಿಸಲಾಗಿದೆ. ಏಕೆಂದರೆ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯವಹಿಸುತ್ತಿರುವ ಕಾರಣ ಅದರ ಹೆಸರು ಕೋಟ್‌ನಲ್ಲಿದೆ.
Pic credit: Google
ಹೀಗಾಗಿ ಟೀಂ ಇಂಡಿಯಾ ಚಾಂಪಿಯನ್ ಆದರೆ, ತಂಡದ ಎಲ್ಲಾ ಆಟಗಾರರು ಪಾಕಿಸ್ತಾನ ಎಂದು ಬರೆದಿರುವ ಕೋಟ್ ಅನ್ನು ಧರಿಸಬೇಕಾಗುತ್ತದೆ.