ಹರಾಜಿನಲ್ಲಿ ಸರ್ ಡಾನ್ ಬ್ರಾಡ್ಮನ್ ಟೆಸ್ಟ್ ಕ್ಯಾಪ್; 2 ಕೋಟಿ ಬಿಕರಿಯಾಗುವ ಸಾಧ್ಯತೆ

2 December 2024

Pic credit: Google

ಪೃಥ್ವಿ ಶಂಕರ

ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಎರಡನೇ ಪಂದ್ಯ ಈ ವಾರ ಡಿಸೆಂಬರ್ 6 ರಿಂದ ಆರಂಭವಾಗಲಿದೆ.

Pic credit: Google

ಪರ್ತ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಟೀಮ್ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ಎರಡೂ ತಂಡಗಳು ಅಡಿಲೇಡ್‌ನಲ್ಲಿ ಮುಖಾಮುಖಿಯಾಗಲಿವೆ.

Pic credit: Google

ಅಡಿಲೇಡ್‌ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ನಡುವೆ ಅಭಿಮಾನಿಗಳಿಗೆ ದೊಡ್ಡ ಅವಕಾಶ ಒದಗಿ ಬಂದಿದೆ.

Pic credit: Google

ಶ್ರೇಷ್ಠ ಆಟಗಾರ ಮತ್ತು ಆಸ್ಟ್ರೇಲಿಯಾದ ದಂತಕಥೆ ಡಾನ್ ಬ್ರಾಡ್ಮನ್ ಅವರ ಟೆಸ್ಟ್ ಕ್ಯಾಪ್ ಈ ವಾರ ಸಿಡ್ನಿಯಲ್ಲಿ ಹರಾಜು ಆಗಲಿದೆ.

Pic credit: Google

ಬ್ರಾಡ್ಮನ್ ಅವರು ಈ ಕ್ಯಾಪ್ ಅನ್ನು 1947-48 ರಲ್ಲಿ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಳಸಿದ್ದರು.

Pic credit: Google

ಈ ಸರಣಿಯು ಆಸ್ಟ್ರೇಲಿಯಾದ ದೃಷ್ಟಿಕೋನದಿಂದ ಐತಿಹಾಸಿಕವಾಗಿದೆ ಏಕೆಂದರೆ ಭಾರತದ ವಿರುದ್ಧದ ಈ ಸರಣಿಯಲ್ಲಿ ಬ್ರಾಡ್ಮನ್ ಕೇವಲ 6 ಇನ್ನಿಂಗ್ಸ್‌ಗಳಲ್ಲಿ 715 ರನ್ ಗಳಿಸಿದ್ದರು. ಇದರಲ್ಲಿ 3 ಶತಕ ಮತ್ತು ಒಂದು ದ್ವಿಶತಕ ಸೇರಿದೆ.

Pic credit: Google

ಸರ್ ಡಾನ್ ಬ್ರಾಡ್ಮನ್ ಕ್ಯಾಪ್‌ಗಾಗಿ 1.95 ಲಕ್ಷ ಡಾಲರ್‌ಗಳಿಂದ 2.60 ಲಕ್ಷ ಡಾಲರ್‌ಗಳ ನಡುವೆ ಬಿಡ್ ಆಗುವ ನಿರೀಕ್ಷೆಯಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ 2.2 ಕೋಟಿ ರೂ. ಆಗಲಿದೆ.

Pic credit: Google