29-05-2024

ನತಾಶಾರಂತೆ ಚಹಲ್​ಗೆ ಕೈ ಕೊಡ್ಬೇಡಿ: ಅಭಿಮಾನಿಗಳ ಮನವಿ

Author: ZAHIR

ಟೀಮ್ ಇಂಡಿಯಾ ಆಟಗಾರ ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಕ್ಯೂಟ್ ಕಪಲ್ಸ್ ಎಂಬುದರಲ್ಲಿ ಡೌಟೇ ಇಲ್ಲ. ಆದರೆ ಈ ಇಬ್ಬರು ಇತ್ತೀಚೆಗೆ ಜೊತೆಯಾಗಿ ಕಾಣಿಸಿಕೊಂಡಿದ್ದು ತುಂಬಾ ಕಡಿಮೆ.

ಇದರ ಬೆನ್ನಲ್ಲೇ ಇಬ್ಬರ ಡೈವೋರ್ಸ್ ಸುದ್ದಿಗಳು ಹರಿದಾಡಿದ್ದವು. ಆ ಬಳಿಕ ಸೋಷಿಯಲ್ ಮೀಡಿಯಾ ಮೂಲಕ ಚಹಲ್ ಹಾಗೂ ಧನಶ್ರೀ ಸ್ಪಷ್ಟನೆ ನೀಡಿ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದರು.

ಇದಾಗ್ಯೂ ಈ ಬಾರಿಯ ಐಪಿಎಲ್ ವೇಳೆ ಧನಶ್ರೀ ವರ್ಮಾ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿಯೇ ಮತ್ತೊಮ್ಮೆ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲವೆಂಬ ಗುಲ್ಲೆದ್ದಿತ್ತು.

ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿಗಳು ಕೂಡ ಕೇಳಿ ಬರುತ್ತಿದೆ. ಈ ಸುದ್ದಿಗಳ ಬೆನ್ನಲ್ಲೇ ಇತ್ತ ಚಹಲ್ ಫ್ಯಾನ್ಸ್ ಧನಶ್ರೀ ವರ್ಮಾಗೆ ಸೋಷಿಯಲ್ ಮೀಡಿಯಾದಲ್ಲಿ ಮನವಿ ಸಲ್ಲಿಸುತ್ತಿದ್ದಾರೆ.

ಧನಶ್ರೀ ವರ್ಮಾ ಅವರ ಪೋಸ್ಟ್​ಗೆ ಕಾಮೆಂಟ್ ಮಾಡಿರುವ ಕೆಲವರು ಹಾರ್ದಿಕ್​ಗೆ ನತಾಶಾ ಕೈ ಕೊಟ್ಟಂತೆ, ನೀವು ಯುಜ್ವೇಂದ್ರ ಚಹಲ್​ಗೆ ಮೋಸ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಇನ್ನು ಕೆಲವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ, ನಿಮ್ಮ ಆಸ್ತಿಗಳನ್ನು ತಾಯಿಯ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳಿ. ಡೈವೋರ್ಸ್ ವೇಳೆ ಆಸ್ತಿ ಹಂಚಿಕೆ ತಪ್ಪಿಸಿಕೊಳ್ಳಬಹುದು ಎಂದು ಯುಜ್ವೇಂದ್ರ ಚಹಲ್​ಗೆ ಬಿಟ್ಟಿ ಸಲಹೆ ನೀಡುತ್ತಿದ್ದಾರೆ.

ಅಷ್ಟಕ್ಕೂ ಧನಶ್ರೀ ವರ್ಮಾ ಪೋಸ್ಟ್​ಗಳಿಗೆ ಇಂತಹ ಕಾಮೆಂಟ್​ಗಳು ಬರಲು ಕಾರಣ, ಶ್ರೇಯಸ್ ಅಯ್ಯರ್ ಜೊತೆ ಕಾಣಿಸಿಕೊಂಡಿರುವುದು. ಈ ಹಿಂದೆ ಧನಶ್ರೀ ಹಾಗೂ ಅಯ್ಯರ್ ಜೊತೆಯಾಗಿ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದರು.

ಇದರ ಬೆನ್ನಲ್ಲೇ ಯುಜ್ವೇಂದ್ರ ಚಹಲ್​ಗೆ ಧನಶ್ರೀ ವರ್ಮಾ ಕೈ ಕೊಡಲಿದ್ದಾರೆ ಎಂಬ ಪುಕಾರುಗಳನ್ನು ಎಬ್ಬಿಸಲಾಗಿತ್ತು. ಇದಾಗ್ಯೂ ಚಹಲ್ ಹಾಗೂ ಧನಶ್ರೀ ಅನೋನ್ಯವಾಗಿಯೇ ದಾಂಪತ್ಯ ಜೀವನವನ್ನು ಮುಂದುವರೆಸಿದ್ದಾರೆ.