ಭಾರತದ 41 ವರ್ಷಗಳ ಹಳೆಯ ವಿಶ್ವ ದಾಖಲೆ ಮುರಿದ ಇಂಗ್ಲೆಂಡ್

1 December 2024

Pic credit: Google

ಪೃಥ್ವಿ ಶಂಕರ

ತವರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ 8 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು.

Pic credit: Google

ಉಭಯ ತಂಡಗಳ ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದು, ಇದರಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.

Pic credit: Google

ಗೆಲುವಿಗೆ ನ್ಯೂಜಿಲೆಂಡ್ ನೀಡಿದ 104 ರನ್‌ಗಳ ಗುರಿಯನ್ನು ಇಂಗ್ಲೆಂಡ್‌ ಕೇವಲ 12.4 ಓವರ್​ಗಳಲ್ಲಿ ಅಂದರೆ 76 ಎಸೆತಗಳಲ್ಲಿ ಬೆನ್ನಟ್ಟಿತು.

Pic credit: Google

ಬೆನ್ ಸ್ಟೋಕ್ಸ್ ಪಡೆ ಬಿರುಸಿನ ಚೇಸಿಂಗ್ ಮಾಡುವ ಮೂಲಕ ಟೆಸ್ಟ್ ನಲ್ಲಿ ವಿಶ್ವದಾಖಲೆ ನಿರ್ಮಿಸಿದೆ. ಟೆಸ್ಟ್ ಪಂದ್ಯವೊಂದರಲ್ಲಿ 100ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ವೇಗವಾಗಿ ಬೆನ್ನಟ್ಟಿದ ತಂಡ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಗಿದೆ.

Pic credit: Google

ಇಂಗ್ಲೆಂಡ್ ಮೊದಲು, ಈ ದಾಖಲೆಯು ನ್ಯೂಜಿಲೆಂಡ್ ಹೆಸರಿನಲ್ಲಿತ್ತು. 2017ರಲ್ಲಿ ಕ್ರೈಸ್ಟ್‌ಚರ್ಚ್ ಮೈದಾನದಲ್ಲಿಯೇ ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್ 112 ಎಸೆತಗಳಲ್ಲಿ 109 ರನ್‌ಗಳ ಗುರಿ ಸಾಧಿಸುವ ಮೂಲಕ ದಾಖಲೆ ನಿರ್ಮಿಸಿತ್ತು.

Pic credit: Google

ಇದಲ್ಲದೆ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ರೇಟ್‌ನೊಂದಿಗೆ 100 ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ತಂಡಗಳ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡವು ನಂಬರ್-1 ಎನಿಸಿಕೊಂಡಿದೆ. ಈ ದಾಖಲೆ ಈ ಹಿಂದೆ ಟೀಂ ಇಂಡಿಯಾ ಹೆಸರಿನಲ್ಲಿತ್ತು.

Pic credit: Google

41 ವರ್ಷಗಳ ಹಿಂದೆ 1983 ರಲ್ಲಿ, ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ 6.82 ರನ್ ರೇಟ್‌ನೊಂದಿಗೆ ಯಶಸ್ವಿಯಾಗಿ ಚೇಸಿಂಗ್ ಮಾಡುವ ಮೂಲಕ ಈ ದಾಖಲೆಯನ್ನು ಮಾಡಿತ್ತು. ಇದೀಗ ಇದನ್ನು ಇಂಗ್ಲೆಂಡ್ ಮುರಿದಿದೆ.

Pic credit: Google