ಯಶಸ್ವಿ ಜೈಸ್ವಾಲ್ ದಾಖಲೆಯನ್ನು ಪುಡಿಗಟ್ಟಿದ ಹ್ಯಾರಿ ಬ್ರೂಕ್
29 November 2024
Pic credit: Google
ಪೃಥ್ವಿ ಶಂಕರ
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹ್ಯಾರಿ ಬ್ರೂಕ್ ಭರ್ಜರಿ ಶತಕ ಸಿಡಿಸಿದ್ದರು. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನ ಬ್ರೂಕ್ ಅಜೇಯ 132 ರನ್ ಗಳಿಸಿದರು.
Pic credit: Google
ಇದರೊಂದಿಗೆ ಹ್ಯಾರಿ ಬ್ರೂಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 2000 ರನ್ ಪೂರೈಸಿದರು. ಜೊತೆಗೆ ಬ್ರೂಕ್, ಟೀಂ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ದಾಖಲೆಯನ್ನು ಮುರಿದರು.
Pic credit: Google
ಹ್ಯಾರಿ ಬ್ರೂಕ್ ಕೇವಲ 36 ಇನ್ನಿಂಗ್ಸ್‌ಗಳಲ್ಲಿ 2000 ಟೆಸ್ಟ್ ರನ್‌ಗಳನ್ನು ಪೂರೈಸಿದ್ದಾರೆ. ಈ ಮೂಲಕ 96 ವರ್ಷಗಳ ನಂತರ, ಇಂಗ್ಲೆಂಡ್ ಆಟಗಾರನೊಬ್ಬ ಕಡಿಮೆ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದ ದಾಖಲೆ ಬ್ರೂಕ್ ಪಾಲಾಗಿದೆ.
Pic credit: Google
ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 7 ಶತಕಗಳನ್ನು ಸಿಡಿಸಿರುವ ಬ್ರೂಕ್, ವಿದೇಶಿ ನೆಲದಲ್ಲೇ 6 ಶತಕ ಸಿಡಿಸಿದ್ದಾರೆ.
Pic credit: Google
ಈ ಪಂದ್ಯಕ್ಕೂ ಮುನ್ನ 56 ರ ಸ್ಟ್ರೈಕ್ ರೇಟ್ನಲ್ಲಿ ರನ್ ಕಲೆಹಾಕಿದ್ದ ಬ್ರೂಕ್ ಅವರ ಸ್ಟ್ರೈಕ್ ರೇಟ್ ಇದೀಗ 60 ಕ್ಕಿಂತ ಹೆಚ್ಚಾಗಿದೆ. ಇದು ಟೆಸ್ಟ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಹೊಂದಿರುವ ಅತ್ಯುತ್ತಮ ಸ್ಟ್ರೈಕ್ ರೇಟ್ ಆಗಿದೆ.
Pic credit: Google
ಈ ಮೂಲಕ ಬ್ರೂಕ್, ಅತ್ಯಧಿಕ ಟೆಸ್ಟ್ ಸರಾಸರಿಯಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಹಿಂದಿಕ್ಕಿದ್ದಾರೆ. ಯಶಸ್ವಿ ಜೈಸ್ವಾಲ್ ಪ್ರಸ್ತುತ 58.82 ಸರಾಸರಿಯಲ್ಲಿ ರನ್ ಗಳಿಸುತ್ತಿದ್ದಾರೆ.