ಅತ್ಯಧಿಕ ಮೊತ್ತಕ್ಕೆ ಹರಾಜಾದ ಹರ್ಮನ್‌ಪ್ರೀತ್ ಸಿಂಗ್

14 october 2024

Pic credit: Google

ಪೃಥ್ವಿ ಶಂಕರ

Pic credit: Google

ಏಳು ವರ್ಷಗಳ ನಂತರ ಹಾಕಿ ಇಂಡಿಯಾ ಲೀಗ್ ಮತ್ತೊಮ್ಮೆ ಚಾಲನೆ ಪಡೆಯುತ್ತಿದೆ. ಈ ಲೀಗ್ ಹರಾಜು ಮೂರು ದಿನಗಳ ಕಾಲ ನಡೆಯಲಿದೆ.

Pic credit: Google

ಈ ಹರಾಜಿನ ಮೊದಲ ದಿನ ಭಾರತದ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗಿದ್ದಾರೆ.

Pic credit: Google

ಹರ್ಮನ್‌ಪ್ರೀತ್ ಸಿಂಗ್‌ಗಾಗಿ ಹಲವು ತಂಡಗಳು ಬಿಡ್‌ ಮಾಡಿದವು. ಆದರೆ ಸುರ್ಮಾ ಹಾಕಿ ಕ್ಲಬ್ ಹರ್ಮನ್​ರನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.

Pic credit: Google

ಹರ್ಮನ್‌ಪ್ರೀತ್​ಗಾಗಿ ಸುರ್ಮಾ ಹಾಕಿ ಕ್ಲಬ್ 78 ಲಕ್ಷ ರೂ. ಖರ್ಚು ಮಾಡಿದೆ. ಇದರೊಂದಿಗೆ, ಹರ್ಮನ್‌ಪ್ರೀತ್ ಸಿಂಗ್ ಇದುವರೆಗಿನ ಹಾಕಿ ಇಂಡಿಯಾ ಲೀಗ್‌ನ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.

Pic credit: Google

ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತವು 2024 ರ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿತ್ತು. ಅದರ ಹಿಂದಿನ ಒಲಿಂಪಿಕ್ಸ್‌ನಲ್ಲೂ ಭಾರತ ಕಂಚಿನ ಪಂದಕ ಗೆದ್ದಿತ್ತು.

Pic credit: Google

ಹರಾಜಿನ ಮೊದಲ ದಿನದಲ್ಲಿ ಅಭಿಷೇಕ್ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಅವರನ್ನು ಶ್ರಾಚಿ ರಾದ್ ಬೆಂಗಾಲ್ ಟೈಗರ್ಸ್ ತಂಡ 72 ಲಕ್ಷಕ್ಕೆ ಖರೀದಿಸಿತು.

Pic credit: Google

ಅಮಿತ್ ರೋಹಿದಾಸ್ ಅವರನ್ನು ತಮಿಳುನಾಡು ಡ್ರಾಗನ್ಸ್ 48 ಲಕ್ಷಕ್ಕೆ ಖರೀದಿಸಿದರೆ, ಅದೇ ವೇಳೆ ಜುಗರಾಜ್ ಸಿಂಗ್ ಕೂಡ 48 ಲಕ್ಷ ರೂ.ಗೆ ಖರೀದಿಯಾಗಿದ್ದಾರೆ.

Pic credit: Google

ಹಾಕಿ ಇಂಡಿಯಾ ಲೀಗ್‌ ಹರಾಜಿನಲ್ಲಿ 400 ದೇಶೀಯ ಮತ್ತು 150 ಕ್ಕೂ ಹೆಚ್ಚು ವಿದೇಶಿ ಪುರುಷ ಆಟಗಾರರಿದ್ದು, ಎಂಟು ಫ್ರಾಂಚೈಸ್ ತಂಡಗಳು ಖರೀದಿಯಲ್ಲಿ ನಿರತವಾಗಿವೆ.