30-05-2024

ಐಸಿಸಿ ಪ್ರಶಸ್ತಿ ಸ್ವೀಕರಿಸಿದ ಟೀಮ್ ಇಂಡಿಯಾ ಆಟಗಾರರು

Author: ZAHIR

ಟೀಮ್ ಇಂಡಿಯಾ ಆಟಗಾರರು 2023ರ ಸಾಲಿನ ಐಸಿಸಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಟಿ20 ವಿಶ್ವಕಪ್​ಗಾಗಿ ಅಮೆರಿಕಗೆ ತೆರಳಿರುವ ಭಾರತೀಯ ಆಟಗಾರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಐಸಿಸಿ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಟೀಮ್ ಇಂಡಿಯಾ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ...

ಟಿ20 ಕ್ರಿಕೆಟ್ ಆಫ್ ದಿ ಇಯರ್: ಸೂರ್ಯಕುಮಾರ್ ಯಾದವ್ ಅವರಿಗೆ ಕಳೆದ ವರ್ಷದ ಟಿ20 ಕ್ರಿಕೆಟರ್ ಪ್ರಶಸ್ತಿ ಒಲಿದಿದೆ.

ಐಸಿಸಿ ಒಡಿಐ ಟೀಮ್ ಕ್ಯಾಪ್: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 2023 ರ ಐಸಿಸಿ ಏಕದಿನ ಟೀಮ್​ನ ಭಾಗವಾಗಿದ್ದಾರೆ.

ಐಸಿಸಿ ಟೆಸ್ಟ್ ಟೀಮ್ ಕ್ಯಾಪ್: ಟೀಮ್ ಇಂಡಿಯಾ ಆಲ್​ರೌಂಡರ್ ರವೀಂದ್ರ ಜಡೇಜಾ ಐಸಿಸಿಯ 2023ರ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಐಸಿಸಿ ಒಡಿಐ ಟೀಮ್ ಕ್ಯಾಪ್: ಶುಭ್​ಮನ್ ಗಿಲ್​ ಕೂಡ ಕಳೆದ ವರ್ಷದ ಐಸಿಸಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದರು. ಈ ಮೂಲಕ ಐಸಿಸಿ ಟೀಮ್ ಕ್ಯಾಪ್ ಪಡೆದಿದ್ದಾರೆ.

ಐಸಿಸಿ ಒಡಿಐ ಟೀಮ್ ಕ್ಯಾಪ್: ಟೀಮ್ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡ 2023ರ ಐಸಿಸಿ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದು, ಹೀಗಾಗಿ ಟೀಮ್ ಕ್ಯಾಪ್ ಸ್ವೀಕರಿಸಿದ್ದಾರೆ.

ಐಸಿಸಿ ಒಡಿಐ ಟೀಮ್ ಕ್ಯಾಪ್: ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಕಳೆದ ವರ್ಷ ಐಸಿಸಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದು, ಅದರಂತೆ ಟೀಮ್ ಕ್ಯಾಪ್ ಪಡೆದಿದ್ದಾರೆ.

ಐಸಿಸಿ ಟಿ20 ಟೀಮ್ ಕ್ಯಾಪ್: ಭಾರತ ತಂಡದ ಎಡಗೈ ವೇಗಿ ಅರ್ಷದೀಪ್ ಸಿಂಗ್ 2023 ಐಸಿಸಿ ಟಿ20 ತಂಡದ ಭಾಗವಾಗಿದ್ದರು. ಅದರಂತೆ ಇದೀಗ ಟೀಮ್ ಕ್ಯಾಪ್ ಸ್ವೀಕರಿಸಿದ್ದಾರೆ.