ಪಾಕಿಸ್ತಾನದಿಂದ ಭಾರತಕ್ಕೆ ಬಂದ ಚಾಂಪಿಯನ್ಸ್ ಟ್ರೋಫಿ

19 January 2025

Pic credit: Google

ಪೃಥ್ವಿ ಶಂಕರ

2025 ರ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ.

Pic credit: Google

ಇದರಲ್ಲಿ ಟೀಮ್ ಇಂಡಿಯಾ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಹೈಬ್ರಿಡ್ ಮಾದರಿಯಲ್ಲಿ ಆಡಲಿದೆ.

Pic credit: Google

ಈ ಟೂರ್ನಿ ಆರಂಭಕ್ಕೂ ಮುನ್ನ ಚಾಂಪಿಯನ್ಸ್ ಟ್ರೋಫಿ ವಿಶ್ವ ಪ್ರವಾಸದಲ್ಲಿದೆ. ಪ್ರತಿ ಐಸಿಸಿ ಪಂದ್ಯಾವಳಿಯ ಮೊದಲು ಟ್ರೋಫಿಯನ್ನು ಈ ರೀತಿ ಪ್ರದರ್ಶನಕ್ಕೀಡಲಾಗುತ್ತದೆ.

Pic credit: Google

ಚಾಂಪಿಯನ್ಸ್ ಟ್ರೋಫಿಯ ಪ್ರವಾಸವು ಪಾಕಿಸ್ತಾನದಲ್ಲಿ ನವೆಂಬರ್ 16 ರಿಂದ ಪ್ರಾರಂಭವಾಯಿತು. ಇದೀಗ ಈ ಟ್ರೋಫಿ ಭಾರತಕ್ಕೆ ಬಂದಿದೆ.

Pic credit: Google

ಈ ಟ್ರೋಫಿ ಭಾರತದಲ್ಲಿ ಜನವರಿ 26 ರವರೆಗೆ ಇರಲಿದ್ದು, ಇದೀಗ ಐಸಿಸಿ ಸೋಶೀಯಲ್ ಮೀಡಿಯಾದಲ್ಲಿ ಅದರ ಕೆಲವು ಫೋಟೋಗಳನ್ನು ಹಂಚಿಕೊಂಡಿದೆ.

Pic credit: Google

ಟ್ರೋಫಿ ಪ್ರವಾಸದ ಸಮಯದಲ್ಲಿ, ಮುಂಬೈನ ವಿವಿಧ ಸ್ಥಳಗಳಲ್ಲಿ ಅಭಿಮಾನಿಗಳಿಗೆ ಅದನ್ನು ನೋಡುವ ಅವಕಾಶ ಸಿಕ್ಕಿತು.

Pic credit: Google

ಭಾರತದ ನಂತರ, ಈ ಟ್ರೋಫಿ ಮತ್ತೆ ಪಾಕಿಸ್ತಾನಕ್ಕೆ ಹೋಗಲಿದ್ದು, ಪಂದ್ಯಾವಳಿಯವರೆಗೂ ಅಲ್ಲಿಯೇ ಇರುತ್ತದೆ.

Pic credit: Google