ಬಿಸಿಸಿಐ ಹಾಗೂಭಾರತ ಸರ್ಕಾರದ ವಿರುದ್ಧ ಐಸಿಸಿಗೆ ದೂರು ನೀಡಿದ್ದ ಪಿಸಿಬಿ ವಿರುದ್ಧ ಪಾಕ್ ಮಾಜಿ ಆಟಗಾರ ಗುಡಿಗಿದ್ದಾರೆ.

17 October 2023

ವಾಸ್ತವವಾಗಿ ಅಕ್ಟೋಬರ್ 14 ರಂದು ಭಾರತ ಹಾಗೂ ಪಾಕಿಸ್ತಾನದ ನಡುವೆ ಹೈವೋಲ್ಟೇಜ್ ವಿಶ್ವಕಪ್ ಪಂದ್ಯ ನಡೆದಿತ್ತು.

ಈ ಪಂದ್ಯವನ್ನು ವೀಕ್ಷಿಸಲು ಪಾಕಿಸ್ತಾನಿ ಅಭಿಮಾನಿಗಳು ಹಾಗೂ ಪಾಕ್ ಮಾಧ್ಯಮಗಳಿಗೆ ಭಾರತ ಸರ್ಕಾರ ವೀಸಾ ನೀಡಿರಲಿಲ್ಲ.

ಪಂದ್ಯದ ಬಳಿಕ ಮಾತನಾಡಿದ್ದ ಪಾಕ್ ತಂಡದ ನಿರ್ದೇಶತಕ ಮಿಕ್ಕಿ ಆರ್ಥರ್, ಆತಿಥೇಯ ಬಿಸಿಸಿಐ ಅನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದರು.

ಈ ನಡುವೆ ಪಾಕ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಪಂದ್ಯದ ನಡುವೆ ನಮಾಜ್ ಮಾಡಿದ್ದು, ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು.

ಇದೀಗ ಇದೆಲ್ಲ ವಿವಾದಗಳಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ತಮ್ಮದೆಯಾದ ಪ್ರಶ್ನೆಗಳನ್ನು ಎತ್ತಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಕನೇರಿಯಾ ಪಾಕ್ ಕ್ರಿಕೆಟ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಮೊದಲ ಟ್ವೀಟ್ ಮಾಡಿರುವ ಕನೇರಿಯಾ, ಭಾರತ ಮತ್ತು ಹಿಂದೂಗಳ ವಿರುದ್ಧ ಕಾಮೆಂಟ್ ಮಾಡಲು ಪಾಕಿಸ್ತಾನಿ ಪತ್ರಕರ್ತೆ ಜೈನಾಬ್ ಅಬ್ಬಾಸ್ ಅವರಿಗೆ ಯಾರು ಹೇಳಿದ್ದರು?

ಐಸಿಸಿ ಈವೆಂಟ್ ಅನ್ನು ಬಿಸಿಸಿಐ ಕಾರ್ಯಕ್ರಮ ಎಂದು ಕರೆಯಲು ಮಿಕ್ಕಿ ಆರ್ಥರ್ ಅವರಿಗೆ ಯಾರು ಹೇಳಿದರು?

ಆಟದ ಮೈದಾನದಲ್ಲಿ ನಮಾಜ್ ಮಾಡಲು ರಿಜ್ವಾನ್ ಅವರನ್ನು ಕೇಳಿದ್ದು ಯಾರು?

ಇತರರಲ್ಲಿ ತಪ್ಪುಗಳನ್ನು ಕಂಡುಹಿಡಿಯಬೇಡಿ ಎಂದು ಡ್ಯಾನಿಶ್ ಕನೇರಿಯಾ ಟ್ವೀಟ್ ಮಾಡಿದ್ದಾರೆ.