2023ರ ವಿಶ್ವಕಪ್​ನಲ್ಲಿ ಮೂರು ತಂಡಗಳು ಸೆಮಿಫೈನಲ್‌ಗೇರುವುದು ಖಚಿತವಾಗಿದ್ದು, ಕೊನೆಯ ಸ್ಥಾನಕ್ಕಾಗಿ 3 ತಂಡಗಳು ಪೈಪೋಟಿ ನಡೆಸುತ್ತಿವೆ.

26 October 2023

2023ರ ವಿಶ್ವಕಪ್​ನಲ್ಲಿ ಎಲ್ಲ ತಂಡಗಳು ತಲಾ 5 ಪಂದ್ಯಗಳನ್ನು ಆಡಿದ್ದು, ಸೆಮಿಫೈನಲ್​ನ ಚಿತ್ರಣ ಬಹುತೇಕ ಸ್ಪಷ್ಟವಾಗಿದೆ.

ಟೂರ್ನಿಯಲ್ಲಿ ಇದುವರೆಗೆ ಟೀಂ ಇಂಡಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಫಾರ್ಮ್ ಅತ್ಯುತ್ತಮವಾಗಿದೆ.

ಭಾರತ ತಂಡ ಅಜೇಯವಾಗಿದ್ದು, ಎಲ್ಲಾ 5 ಪಂದ್ಯಗಳನ್ನು ಗೆದ್ದು 10 ಅಂಕಗಳನ್ನು ಸಂಪಾದಿಸಿದೆ.

ಆಸ್ಟ್ರೇಲಿಯ, ಪಾಕಿಸ್ತಾನ, ನ್ಯೂಜಿಲೆಂಡ್‌ನಂತಹ ತಂಡಗಳನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಪ್ರಶಸ್ತಿಗೆ ಪ್ರಬಲ ಸ್ಪರ್ಧಿ ಎನಿಸಿಕೊಂಡಿದೆ.

ಅದೇ ಸಮಯದಲ್ಲಿ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್‌ ಪ್ರದರ್ಶನವೂ ಅದ್ಭುತವಾಗಿದ್ದು, ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಸೋತಿವೆ.

ದಕ್ಷಿಣ ಆಫ್ರಿಕಾ ತಂಡ 4 ಪಂದ್ಯಗಳಲ್ಲಿ ಗೆದ್ದಿದ್ದು, 8 ಅಂಕ ಹೊಂದಿದೆ. ಆದರೆ ತಂಡದ ನೆಟ್​ ರನ್​ರೇಟ್ ಅದ್ಭುತವಾಗಿದ್ದು, ಈ ತಂಡ ಸೆಮಿಫೈನಲ್​ಗೇರುವುದು ಖಚಿತವಾಗಿದೆ.

ನ್ಯೂಜಿಲೆಂಡ್‌ ತಂಡ ಕೂಡ 4 ಪಂದ್ಯಗಳಲ್ಲಿ ಗೆದ್ದಿದ್ದು, 8 ಅಂಕ ಹೊಂದಿದೆ. ಹೀಗಾಗಿ ತಂಡ ಸೆಮಿಫೈನಲ್‌ಗೇರಬೇಕೆಂದರೆ ಕನಿಷ್ಠ ಪಕ್ಷ 3 ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಿದೆ.

ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೆಮಿಫೈನಲ್ ತಲುಪುವುದು ಖಚಿತ ಎಂದು ಪರಿಗಣಿಸಲಾಗಿದೆ.

ನಾಲ್ಕನೇ ಸ್ಥಾನಕ್ಕಾಗಿ ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ಹೋರಾಟ ನಡೆಯುತ್ತಿದೆ.

ಕಳೆದ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯ ಪ್ರದರ್ಶನ ನೀಡಿದ ರೀತಿಯನ್ನು ನೋಡಿದರೆ, ಕಾಂಗರೂ ಪಡೆ ಕೊನೆಯ ನಾಲ್ಕರ ಘಟ್ಟಕ್ಕೆ ತಲುಪುವ ಸಾಧ್ಯತೆ ಹೆಚ್ಚಿದೆ.