ಅಕ್ಟೋಬರ್ 5 ರಿಂದ ಆರಂಭವಾಗಿರುವ ವಿಶ್ವಕಪ್ ದೇಶದ ವಿವಿದ ನಗರಗಳಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ.

16 October 2023

ಇದೀಗ ಈ ಮಹಾಸಂಭ್ರಮ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನ  ಚಿನ್ನಸ್ವಾಮಿ ಸ್ಟೇಡಿಯಂ ವಿಶ್ವಕಪ್​ನ ಮೊದಲ ಪಂದ್ಯಕ್ಕೆ ಆತಿಥ್ಯವಹಿಸಲು ಸಿದ್ದವಾಗಿದೆ.

40000 ಪ್ರೇಕ್ಷಕರ ಆಸನ ಸಾಮರ್ಥ್ಯ ಹೊಂದಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಈ ಬಾರಿ 5 ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯವಹಿಸುತ್ತಿದೆ.

ಈ ಕ್ರೀಡಾಂಗಣದಲ್ಲಿ ಅಕ್ಟೋಬರ್ 20 ರಂದು ಮೊದಲ ವಿಶ್ವಕಪ್‌ ಪಂದ್ಯ ನಡೆಯುತ್ತಿದ್ದು, ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಎರಡನೇ ಪಂದ್ಯ ಅಕ್ಟೋಬರ್ 26 ರಂದು ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ನಡೆಯಲ್ಲಿದೆ.

ಮೂರನೇ ಪಂದ್ಯ ನವೆಂಬರ್ 4 ರಂದು ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನದ ನಡುವೆ ನಡೆಯಲ್ಲಿದೆ.

ನಾಲ್ಕನೇ ಪಂದ್ಯ ನವೆಂಬರ್ 09 ರಂದು  ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ನಡುವೆ ನಡೆಯಲ್ಲಿದೆ.

ಅಂತಿಮ ಪಂದ್ಯ ನವೆಂಬರ್ 12 ರಂದು ಭಾರತ ಮತ್ತು ನೆದರ್ಲೆಂಡ್ಸ್ ನಡುವೆ ನಡೆಯಲ್ಲಿದೆ.