ಡೇ-ನೈಟ್ ಟೆಸ್ಟ್‌ನಲ್ಲಿ ಅಧಿಕ ವಿಕೆಟ್ ತೆಗೆದ ಬೌಲರ್ ಯಾರು?

4  December 2024

Pic credit: Google

ಪೃಥ್ವಿ ಶಂಕರ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಹಗಲು-ರಾತ್ರಿ ಟೆಸ್ಟ್ ಡಿಸೆಂಬರ್ 6 ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿದೆ.

Pic credit: Google

ಹಗಲು-ರಾತ್ರಿ ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾ ತಂಡ ಅದ್ಭುತ ದಾಖಲೆ ಹೊಂದಿದೆ. ಈ ತಂಡವು 12 ಡೇ-ನೈಟ್ ಟೆಸ್ಟ್‌ಗಳಲ್ಲಿ 11 ರಲ್ಲಿ ಗೆದ್ದಿದ್ದು, ಒಂದರಲ್ಲಿ ಸೋತಿದೆ.

Pic credit: Google

ಭಾರತವು 4 ಡೇ-ನೈಟ್ ಟೆಸ್ಟ್‌ಗಳಲ್ಲಿ 3 ರಲ್ಲಿ ಗೆದ್ದಿದೆ ಮತ್ತು ಅದೂ ಒಂದು ಪಂದ್ಯವನ್ನು ಸೋತಿದೆ. ಕಳೆದ ಪ್ರವಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಹೀನಾಯ ಸೋಲು ಕಂಡಿತ್ತು.

Pic credit: Google

ಇನ್ನು ಡೇ-ನೈಟ್ ಟೆಸ್ಟ್‌ನಲ್ಲಿ ಅಧಿಕ ವಿಕೆಟ್ ತೆಗೆದ ಬೌಲರ್​ಗಳಲ್ಲಿ ಮಿಚೆಲ್ ಸ್ಟಾರ್ಕ್ ಮೊದಲ ಸ್ಥಾನದಲ್ಲಿದ್ದಾರೆ. ಸ್ಟಾರ್ಕ್​ ಗುಲಾಬಿ ಚೆಂಡಿನಲ್ಲಿ ಕೇವಲ 18.71ರ ಸರಾಸರಿಯಲ್ಲಿ 66 ವಿಕೆಟ್‌ಗಳನ್ನು ಪಡೆದಿದ್ದಾರೆ.

Pic credit: Google

ಹಗಲು-ರಾತ್ರಿ ಟೆಸ್ಟ್‌ನಲ್ಲಿ ನಾಥನ್ ಲಿಯಾನ್ ಗುಲಾಬಿ ಚೆಂಡಿನೊಂದಿಗೆ 43 ಮತ್ತು ಪ್ಯಾಟ್ ಕಮಿನ್ಸ್ 37 ವಿಕೆಟ್‌ಗಳನ್ನು ಪಡೆದಿದ್ದಾರೆ.

Pic credit: Google

ಆರ್ ಅಶ್ವಿನ್ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಭಾರತದ ಪರ ಗರಿಷ್ಠ 18 ವಿಕೆಟ್ ಪಡೆದಿದ್ದಾರೆ.

Pic credit: Google

ಇದೀಗ ಜಸ್ಪ್ರೀತ್ ಬುಮ್ರಾಗೆ ಅಡಿಲೇಡ್‌ನಲ್ಲಿ ಅಶ್ವಿನ್ ಅವರನ್ನು ಹಿಂದಿಕ್ಕುವ ಅವಕಾಶವಿದೆ. ಬುಮ್ರಾ ಇದುವರೆಗೆ ತಮ್ಮ ಹೆಸರಿನಲ್ಲಿ10 ವಿಕೆಟ್‌ ಪಡೆದಿದ್ದಾರೆ. ಆದರೆ, ಅಶ್ವಿನ್ ಎರಡನೇ ಟೆಸ್ಟ್ ಆಡಿದರೆ ಬುಮ್ರಾ ಎರಡನೇ ಸ್ಥಾನದಲ್ಲೇ ಉಳಿಯಲಿದ್ದಾರೆ.

Pic credit: Google