ಹೆಡ್ ಶತಕ ಬಾರಿಸಿದರೆ ಆಸ್ಟ್ರೇಲಿಯಾಕ್ಕೆ ಗೆಲುವು ಖಚಿತ

10 December 2024

Pic credit: Google

ಪೃಥ್ವಿ ಶಂಕರ

ಅಡಿಲೇಡ್​ನಲ್ಲಿ ಟೀಂ ಇಂಡಿಯಾ ಸೋಲಿಗೆ ಒಂದೆಡೆ ಬ್ಯಾಟಿಂಗ್ ವಿಭಾಗದ ವೈಫಲ್ಯ ಕಾರಣವಾದರೆ ಇನ್ನೊಂದೆಡೆ ಆಸೀಸ್​ನ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್​ ಕೂಡ ಕಾರಣರಾದರು.

Pic credit: Google

ಅಡಿಲೇಡ್ ಮೈದಾನದಲ್ಲಿ, ಟ್ರಾವಿಸ್ ಹೆಡ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ 16 ನೇ ಶತಕವನ್ನು ಸಿಡಿಸುವ ಮೂಲಕ ತಮ್ಮ ವಿಶೇಷ ದಾಖಲೆಯನ್ನು ಉಳಿಸಿಕೊಂಡರು.

Pic credit: Google

ಟ್ರಾವಿಸ್ ಹೆಡ್ ಅವರು ಶತಕ ಬಾರಿಸಿದಾಗಲೆಲ್ಲಾ ಆಸ್ಟ್ರೇಲಿಯ ತಂಡವು ಪಂದ್ಯವನ್ನು ಸೋತಿಲ್ಲ ಎಂಬುದು ಈ ದಾಖಲೆಯ ವಿಶೇಷತೆಯಾಗಿದೆ.

Pic credit: Google

ಟ್ರಾವಿಸ್ ಹೆಡ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 16 ಶತಕಗಳನ್ನು ಗಳಿಸಿದ್ದಾರೆ ಮತ್ತು ಆ 16 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ.

Pic credit: Google

ಟ್ರಾವಿಸ್ ಹೆಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 8 ಶತಕಗಳನ್ನು ಗಳಿಸಿದ್ದು, ಆ ಎಲ್ಲಾ ಪಂದ್ಯಗಳನ್ನು ಆಸ್ಟ್ರೇಲಿಯಾ ಗೆದ್ದಿದೆ.

Pic credit: Google

ಹೆಡ್ ಅವರು ಏಕದಿನದಲ್ಲಿ 6 ಶತಕ ಮತ್ತು ಟಿ20 ಕ್ರಿಕೆಟ್‌ನಲ್ಲಿ 2 ಶತಕಗಳನ್ನು ಸಿಡಿಸಿದ್ದಾರೆ. ಆಸ್ಟ್ರೇಲಿಯಾ ಈ ಎಲ್ಲಾ ಪಂದ್ಯಗಳನ್ನು ಸಹ ಗೆದ್ದಿದೆ.

Pic credit: Google

ಹೀಗಾಗಿ ಟ್ರಾವಿಸ್ ಹೆಡ್ ಅವರನ್ನು ಗಾಬಾ ಟೆಸ್ಟ್‌ನಲ್ಲಿ ಶತಕ ಬಾರಿಸದಂತೆ ತಡೆಯಬೇಕಾಗುತ್ತದೆ. ಇಲ್ಲದಿದ್ದರೆ ಅವರ ದಾಖಲೆಯ ಆಧಾರದ ಮೇಲೆ ನೀವು ಫಲಿತಾಂಶವನ್ನು ಊಹಿಸಬಹುದಾಗಿದೆ.

Pic credit: Google