ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಐಸಿಸಿ ನಿಯಮಗಳನ್ನು ಉಲ್ಲಂಘಿಸಿದ ವಿರಾಟ್ ಕೊಹ್ಲಿಗೆ ಐಸಿಸಿ ದಂಡ ವಿಧಿಸಿದೆ.
Pic credit: Google
ವಾಸ್ತವವಾಗಿ ಮೆಲ್ಬೋರ್ನ್ ಟೆಸ್ಟ್‌ನ ಮೊದಲ ದಿನದಂದು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಕೊನ್ಸ್ಟಾಸ್ ಅವರೊಂದಿಗೆ ಜಗಳ ಮಾಡಿಕೊಂಡಿದ್ದರು.
Pic credit: Google
ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮ್ಯಾಚ್ ರೆಫರಿ, ಘಟನೆಯನ್ನು ಕುಲಂಕುಶವಾಗಿ ಪರಿಶೀಲಿಸಿ ಕೊಹ್ಲಿಯನ್ನು ದೂಷಿ ಎಂದು ಘೋಷಿಸಿದೆ.
Pic credit: Google
ಆ ಪ್ರಕಾರ ಕೊಹ್ಲಿಗೆ ಐಸಿಸಿ ಶಿಕ್ಷೆ ವಿಧಿಸಿದ್ದು, ಶಿಕ್ಷೆಯ ಪ್ರಮಾಣವಾಗಿ ಕೊಹ್ಲಿ ಪಂದ್ಯ ಶುಲ್ಕ ಶೇಕಡಾ 20 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ. ಇದರ ಜೊತೆಗೆ 1 ಡಿಮೆರಿಟ್ ಅಂಕವನ್ನು ನೀಡಲಾಗಿದೆ.
Pic credit: Google
ಇದೀಗ ಶೇಕಡಾ 20 ರಷ್ಟು ದಂಡ ಎಂದರೆ ಕೊಹ್ಲಿ ಎಷ್ಟು ಮೊತ್ತವನ್ನು ಪಾವತಿಸಬೇಕು ಎಂಬುದು ಎಲ್ಲರಲ್ಲೂ ಮೂಡಿರುವ ಅನುಮಾನವಾಗಿದೆ.
Pic credit: Google
ವಾಸ್ತವವಾಗಿ ಪ್ರತಿ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ವಿರಾಟ್ ಕೊಹ್ಲಿಗೆ 15 ಲಕ್ಷ ರೂ. ಸಂಭಾವನೆ ನೀಡುತ್ತದೆ. ಇದರಲ್ಲಿ ಶೇ 20 ರಷ್ಟು ಮೊತ್ತವನ್ನು ಕೊಹ್ಲಿ ದಂಡವಾಗಿ ಪಾವತಿಸಬೇಕಾಗುತ್ತದೆ.
Pic credit: Google
ಅಂದರೆ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಮಾಡಿದ ತಪ್ಪಿಗೆ ವಿರಾಟ್ ಕೊಹ್ಲಿ 3 ಲಕ್ಷ ರೂ. ಹಣವನ್ನು ದಂಡವಾಗಿ ಪಾವತಿಸಲಿದ್ದಾರೆ.