IND vs BAN: ದಿಗ್ಗಜರ ದಾಖಲೆ ಮುರಿಯುವ ತವಕದಲ್ಲಿ ಕೊಹ್ಲಿ- ಜಡೇಜಾ

17 september 2024

Pic credit: Google

ಪೃಥ್ವಿ ಶಂಕರ

Pic credit: Google

ಸೆಪ್ಟೆಂಬರ್ 19 ರ ಗುರುವಾರದಿಂದ ಚೆನ್ನೈನಲ್ಲಿ ಟೀಂ ಇಂಡಿಯಾ ಹಾಗೂ ಬಾಂಗ್ಲಾದೇಶ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

Pic credit: Google

ಈ ಪಂದ್ಯದಲ್ಲಿ ಟೀಂ ಇಂಡಿಯಾದ ಹಲವು ಸ್ಟಾರ್ ಆಟಗಾರರು ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರಿಗೆ ಇನ್ನೂ ಕೆಲವು ದಾಖಲೆಗಳನ್ನು ಸೇರಿಸುವ ಅವಕಾಶವನ್ನು ಹೊಂದಿದ್ದಾರೆ.

Pic credit: Google

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಹಲವು ದಾಖಲೆ ಬರೆಯುವ ಅವಕಾಶ ಹೊಂದಿದ್ದು, ಅದರಲ್ಲಿ ಪ್ರಮುಖವಾಗಿ ಕೊಹ್ಲಿ, ರಾಹುಲ್ ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್ ಅವರ ದಾಖಲೆ ಸರಿಗಟ್ಟುವ ಅವಕಾಶ ಪಡೆದಿದ್ದಾರೆ.

Pic credit: Google

ಭಾರತದ ಪರ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ 8 ಬಾರಿ ಟಾಪ್ ಸ್ಕೋರ್ ಮಾಡಿದ ದಾಖಲೆಯನ್ನು ರಾಹುಲ್ ದ್ರಾವಿಡ್ ಮತ್ತು ಸುನಿಲ್ ಗವಾಸ್ಕರ್ ಹೊಂದಿದ್ದಾರೆ.

Pic credit: Google

ಪ್ರಸ್ತುತ ಕೊಹ್ಲಿ ಈ ಇಬ್ಬರಿಗಿಂತ ಸ್ವಲ್ಪ ಹಿಂದೆ ಇದ್ದು, ಎರಡೂ ಇನ್ನಿಂಗ್ಸ್‌ಗಳಲ್ಲಿ 7 ಬಾರಿ ಅಗ್ರ ಸ್ಕೋರರ್ ಆಗಿದ್ದಾರೆ. ಹೀಗಾಗಿ ಈ ಟೆಸ್ಟ್ ಸರಣಿಯಲ್ಲಿ ಈ ದಿಗ್ಗಜರ ದಾಖಲೆಯನ್ನು ಸರಿಗಟ್ಟಲು ಕೊಹ್ಲಿಗೆ ಅವಕಾಶವಿದೆ.

Pic credit: Google

ಕೊಹ್ಲಿ ಜೊತೆಗೆ ರವೀಂದ್ರ ಜಡೇಜಾ ಕೂಡ ದಾಖಲೆ ಮುರಿಯುವ ಸನಿಹದಲ್ಲಿದ್ದು, ಇನ್ನಿಂಗ್ಸ್‌ವೊಂದರಲ್ಲಿ ಅಧಿಕ ಬಾರಿ 5 ವಿಕೆಟ್ ಪಡೆದವರ ಪಟ್ಟಿಯಲ್ಲಿ ಕಪಿಲ್ ದೇವ್ ಅವರನ್ನು ಹಿಂದಿಕ್ಕುವ ಅವಕಾಶವನ್ನು ಪಡೆದಿದ್ದಾರೆ.

Pic credit: Google

ಭಾರತದ ನೆಲದಲ್ಲಿ ಕಪಿಲ್ ದೇವ್ 11 ಬಾರಿ ಈ ಸಾಧನೆ ಮಾಡಿದ್ದು, ಸದ್ಯ ಜಡೇಜಾ ಕೂಡ 11 ಬಾರಿ ಈ ಸಾಧನೆ ಮಾಡಿದ್ದಾರೆ. ಇದೀಗ ಈ ಸರಣಿಯ ಇನ್ನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಪಡೆಯುವಲ್ಲಿ ಜಡೇಜಾ ಯಶಸ್ವಿಯಾದರೆ, ಕಪಿಲ್ ದೇವ್ ದಾಖಲೆ ಮುರಿಯಲಿದೆ.