ಗುರುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ರೋಹಿತ್ ಬ್ರಿಗೇಡ್, ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಸೋಲಿಸಿತು.

19 October 2023

ಇದು ಈ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ನಾಲ್ಕನೇ ಗೆಲುವು. ಇದಕ್ಕೂ ಮೊದಲು ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನವನ್ನು ಸೋಲಿಸಿತ್ತು.

ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾದ ಗೆಲುವಿನ ಹೀರೋ ಎನಿಸಿಕೊಂಡ ವಿರಾಟ್ ಕೊಹ್ಲಿ, 103 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು.

ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾಗೆ ಮೊದಲ ಸ್ಥಾನಕ್ಕೇರುವ ಅವಕಾಶವಿತ್ತು. ಅದಕ್ಕಾಗಿ 257 ರನ್​ಗಳ ಗುರಿಯನ್ನು 33 ಓವರ್​ಗಳಲ್ಲಿ ಮುಗಿಸಬೇಕಿತ್ತು.

ಆದರೆ ಟೀಂ ಇಂಡಿಯಾ 41.3 ಓವರ್‌ಗಳಲ್ಲಿ 257 ರನ್​ಗಳ ಗುರಿ ತಲುಪಿತು. ಇದಕ್ಕೆ ಕೊಹ್ಲಿಯ ನಿದಾನಗತಿಯ ಬ್ಯಾಟಿಂಗ್ ಕೂಡ ಕಾರಣವಾಯಿತು.

ಈ ಪಂದ್ಯದಲ್ಲಿ ಕೊಹ್ಲಿ ಶತಕದ ಸಮೀಪದಲ್ಲಿದ್ದಾಗ ನಿದಾನಗತಿಯ ಬ್ಯಾಟಿಂಗ್ ಮಾಡಿದರು. ಹೀಗಾಗಿ ಪಂದ್ಯ 40 ಓವರ್​ಗಳನ್ನು ಮೀರಿ ಸಾಗಿತು.

ಕೊಹ್ಲಿ 80 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಟೀಂ ಇಂಡಿಯಾ ಗೆಲುವಿಗೆ 20 ರನ್ ಹಾಗೂ ವಿರಾಟ್ ಶತಕಕ್ಕೆ 20 ರನ್ ಅಗತ್ಯವಿತ್ತು.

ಈ ಹಂತದಲ್ಲಿ ವಿರಾಟ್ ಹಲವು ಚೆಂಡುಗಳನ್ನು ವ್ಯರ್ಥ ಮಾಡಿದರು. ಹೀಗಾಗಿ 40 ಓವರ್​ವೊಳಗೆ ಮುಗಿಯಬೇಕಿದ್ದ ಪಂದ್ಯ 41.3ನೇ ಓವರ್​ನಲ್ಲಿ ಅಂತ್ಯಗೊಂಡಿತು.