ಆಫ್ರಿಕಾ ವಿರುದ್ಧ ದಾಖಲೆ ಬರೆಯುವ ಹೊಸ್ತಿಲಿನಲ್ಲಿ ಟೀಂ ಇಂಡಿಯಾ ವೇಗಿ

10 November 2024

Pic credit: Google

ಪೃಥ್ವಿ ಶಂಕರ

ಜಿಂಬಾಬ್ವೆ, ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿದ್ದ ಟಿ20 ವಿಶ್ವ ಚಾಂಪಿಯನ್ ಟೀಂ ಇಂಡಿಯಾ ಮತ್ತೊಂದು ಸರಣಿಯಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ.

Pic credit: Google

ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲ ಟಿ20 ಪಂದ್ಯದಲ್ಲಿ 41 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

Pic credit: Google

ಇದೀಗ ಎರಡನೇ ಟಿ20 ಪಂದ್ಯ ನವೆಂಬರ್ 10ರ ಭಾನುವಾರ ಪೋರ್ಟ್ ಎಲಿಜಬೆತ್‌ನಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಟೀಂ ಇಂಡಿಯಾ ಸರಣಿ ಸೋಲಿನಿಂದ ಪಾರಾಗಲಿದೆ

Pic credit: Google

ಈ ಪಂದ್ಯದಲ್ಲಿ ಸತತ 2 ಪಂದ್ಯಗಳಲ್ಲಿ ಶತಕ ಬಾರಿಸಿ ದಾಖಲೆ ಬರೆದಿರುವ ಸಂಜು ಸ್ಯಾಮ್ಸನ್ ಮೇಲೆ ಮತ್ತೊಮ್ಮೆ ಕಣ್ಣು ನೆಟ್ಟಿದ್ದು, ಮತ್ತೊಬ್ಬ ಆಟಗಾರನಿಗೆ ಈ ಪಂದ್ಯ ವಿಶೇಷ ಎನಿಸಬಹುದು.

Pic credit: Google

ಈ ಆಟಗಾರ ಸ್ಟಾರ್ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್, ಈ ಪಂದ್ಯದಲ್ಲಿ ದೊಡ್ಡ ದಾಖಲೆ ಮಾಡುವ ಸನಿಹದಲ್ಲಿದ್ದು ಅದಕ್ಕಾಗಿ ಕೇವಲ 2 ವಿಕೆಟ್‌ಗಳ ಅಗತ್ಯವಿದೆ.

Pic credit: Google

ಮೊದಲ ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದ ಅರ್ಷದೀಪ್ ಈ ಪಂದ್ಯದಲ್ಲಿ 2 ವಿಕೆಟ್ ಪಡೆದರೆ, ಟಿ20ಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಳ್ಳಲಿದ್ದಾರೆ.

Pic credit: Google

ಅರ್ಶ್ದೀಪ್ ಇದುವರೆಗೆ 57 ಪಂದ್ಯಗಳಲ್ಲಿ 88 ವಿಕೆಟ್ ಪಡೆದಿದ್ದು, ಇದೀಗ 2 ವಿಕೆಟ್ ಪಡೆದರೆ, ಟಿ20ಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಳ್ಳಲಿದ್ದಾರೆ.

Pic credit: Google

ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ವೇಗಿ ಜಸ್ಪ್ರೀತ್ ಬುಮ್ರಾ ಇದುವರೆಗೆ ಟಿ20 ಮಾದರಿಯಲ್ಲಿ 89 ವಿಕೆಟ್ ಉರುಳಿಸಿದ್ದಾರೆ.

Pic credit: Google