ಟಿ20 ಯಲ್ಲಿ ಟೆಸ್ಟ್ ಆಡಿ ಗಂಭೀರ್- ರಾಹುಲ್ ದಾಖಲೆ ಮುರಿದ ಹಾರ್ದಿಕ್ ಪಾಂಡ್ಯ

10 November 2024

Pic credit: Google

ಪೃಥ್ವಿ ಶಂಕರ

Pic credit: Google

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 45 ಎಸೆತಗಳಲ್ಲಿ ಕೇವಲ 39 ರನ್ ಗಳಿಸಿದ್ದು, ಅವರ ಆಮೆಗತಿಯ ಬ್ಯಾಟಿಂಗ್ ಮೇಲೆ ಪ್ರಶ್ನೆಗಳು ಎದ್ದಿವೆ.

Pic credit: Google

Pic credit: Google

ಈ ಪಂದ್ಯದಲ್ಲಿ ಪಾಂಡ್ಯ ಅವರ ಸ್ಟ್ರೈಕ್ ರೇಟ್ ಕೂಡ 86.67 ಆಗಿತ್ತು. ಇದು ಪಾಂಡ್ಯ ಅವರ ಟಿ20 ಇನ್ನಿಂಗ್ಸ್‌ನಲ್ಲಿಯೇ ಅತಿ ಕೆಟ್ಟ ಪ್ರದರ್ಶನವಾಗಿದೆ.

Pic credit: Google

Pic credit: Google

ಈ ಮೂಲಕ ಪಾಂಡ್ಯ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅಜೇಯರಾಗಿ ಉಳಿದು ಅತ್ಯಂತ ಕಡಿಮೆ ಸ್ಟ್ರೈಕ್ ರೇಟ್​ ಹೊಂದಿದ್ದ ಭಾರತದ ಬ್ಯಾಟರ್​ಗಳ ಪಟ್ಟಿಯಲ್ಲಿ ಗೌತಮ್ ಗಂಭೀರ್ (93.33) ಮತ್ತು ಕೆಎಲ್ ರಾಹುಲ್ (91.07) ಅವರನ್ನು ಹಿಂದಿಕ್ಕಿದ್ದಾರೆ.

Pic credit: Google

Pic credit: Google

ಇನ್ನು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಇಶಾನ್ ಕಿಶನ್, ಅಜೇಯರಾಗಿ ಉಳಿದು 83.33 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಬೇಡದ ದಾಖಲೆ ಬರೆದಿದ್ದಾರೆ.

Pic credit: Google

Pic credit: Google

ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಅಜೇಯರಾಗಿ ಉಳಿದರೂ ಅವರ ಈ ನಿಧಾನಗತಿಯ ಇನ್ನಿಂಗ್ಸ್‌ನಿಂದ ಟೀಂ ಇಂಡಿಯಾ ಅಲ್ಪ ಮೊತ್ತಕ್ಕೆ ಸೀಮಿತವಾಯಿತು.

Pic credit: Google

Pic credit: Google

ಹೀಗಾಗಿ ಭಾರತ ನೀಡಿದ 124 ರನ್​ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಮೂರು ವಿಕೆಟ್​​ಗಳ ಜಯಗಳಿಸಿತು.

Pic credit: Google