ಪಿಂಕ್ ಬಾಲ್ ಬೆಲೆ ಎಷ್ಟು? ಅದರ ವಿಶೇಷತೆ ಬಗ್ಗೆ ನಿಮಗೆಷ್ಟು ಗೊತ್ತು?
5 December 2024
Pic credit: Google
ಪೃಥ್ವಿ ಶಂಕರ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಪಂದ್ಯ ಅಡಿಲೇಡ್‌ನಲ್ಲಿ ನಡೆಯಲಿದೆ. ಪರ್ತ್ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿರುವ ಟೀಮ್ ಇಂಡಿಯಾ ಈ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
Pic credit: Google
ಅಡಿಲೇಡ್ ಟೆಸ್ಟ್ ಪಂದ್ಯ ಹಗಲು-ರಾತ್ರಿ ಮಾದರಿಯಲ್ಲಿ ಆಡಲಾಗುತ್ತಿದ್ದು, ಇದಕ್ಕಾಗಿ ಗುಲಾಬಿ ಬಣ್ಣದ ಚೆಂಡನ್ನು ಬಳಸಲಾಗುತ್ತದೆ.
Pic credit: Google
ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಮಾತ್ರ ಗುಲಾಬಿ ಬಣ್ಣದ ಚೆಂಡನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಟೆಸ್ಟ್‌ಗಳಲ್ಲಿ ಬಳಸುವ ಕೆಂಪು ಚೆಂಡಿಗಿಂತ ಇದು ಹಲವು ವಿಧಗಳಲ್ಲಿ ಭಿನ್ನವಾಗಿದೆ.
Pic credit: Google
ಗುಲಾಬಿ ಚೆಂಡಿನ ಮೇಲೆ ಹೆಚ್ಚುವರಿ ಬಣ್ಣದ ಪದರಗಳಿರಲಿವೆ. ಅಂದರೆ ಕೆಂಪು ಚೆಂಡಿಗೆ ಹೋಲಿಸಿದರೆ ಪಿಂಕ್ ಬಾಲ್ನಲ್ಲಿ ಹೆಚ್ಚಿನ ಪದರಗಳನ್ನು ಅನ್ವಯಿಸಲಾಗುತ್ತದೆ.
Pic credit: Google
ಪಿಂಕ್ ಬಾಲ್ನಲ್ಲಿ 40 ಓವರ್‌ಗಳವರೆಗೆ ಹೊಳಪು ಉಳಿದಿರುತ್ತದೆ. ಆದ್ದರಿಂದ, ಈ ಬಾಲ್ನಲ್ಲಿ ಬೌಲರ್‌ಗಳು ಹೆಚ್ಚು ಪ್ರಯೋಜನವನ್ನು ಪಡೆಯುತ್ತಾರೆ ಮತ್ತು ಹೆಚ್ಚು ಸ್ವಿಂಗ್ ಮತ್ತು ಸೀಮ್ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.
Pic credit: Google
ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಸುಮಾರು 10 ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು. ಅನೇಕ ಪ್ರಯೋಗಗಳ ನಂತರ ಈ ಟೆಸ್ಟ್ಗೆ ಅಂತಿಮವಾಗಿ ಪಿಂಕ್ ಬಾಲನ್ನು ಆಯ್ಕೆ ಮಾಡಲಾಯಿತು.
Pic credit: Google
ಏಕೆಂದರೆ ಕೆಂಪು, ಕಿತ್ತಳೆ, ಹಳದಿ ಅಥವಾ ಇತರ ಬಣ್ಣಗಳಿಗಿಂತ ಸಂಜೆ ಮತ್ತು ರಾತ್ರಿಯಲ್ಲಿ ಈ ಚೆಂಡು ಹೆಚ್ಚು ಹೈಲೈಟ್ ಆಗಿ ಕಾಣುತ್ತದೆ. ಅದಕ್ಕಾಗಿಯೇ ಈ ಚೆಂಡನ್ನು ಬಳಸಲಾಗುತ್ತದೆ.
Pic credit: Google
ಅಡಿಲೇಡ್ ಟೆಸ್ಟ್‌ನಲ್ಲಿ ಕೂಕಬುರಾ ಕಂಪನಿಯ ಗುಲಾಬಿ ಬಣ್ಣದ ಚೆಂಡನ್ನು ಬಳಸಲಾಗುವುದು. ಮಾಧ್ಯಮಗಳ ವರದಿ ಪ್ರಕಾರ ಇದರ ಬೆಲೆ ಸುಮಾರು 20-25 ಸಾವಿರ ರೂ. ಆಗಿದೆ.