ಮುಂಬೈ ನಾಯಕತ್ವದಿಂದ ಹಾರ್ದಿಕ್ ಪಾಂಡ್ಯಗೆ ಕೋಕ್?

13 october 2024

Pic credit: Google

ಪೃಥ್ವಿ ಶಂಕರ

Pic credit: Google

ಐಪಿಎಲ್ 2025ಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡ ಮಹತ್ವದ ನಿರ್ಧಾರ ಕೈಗೊಂಡಿದೆ. ಫ್ರಾಂಚೈಸಿ ತನ್ನ ಮುಖ್ಯ ಕೋಚ್ ಅನ್ನು ಬದಲಾಯಿಸಿದೆ.

Pic credit: Google

ಅದರಂತೆ ಮಾರ್ಕ್ ಬೌಚರ್ ಬದಲಿಗೆ ಮಹೇಲಾ ಜಯವರ್ಧನೆ ಅವರಿಗೆ ಮತ್ತೊಮ್ಮೆ ಮುಖ್ಯ ಕೋಚ್ ಜವಾಬ್ದಾರಿ ನೀಡಲಾಗಿದೆ. ಜಯವರ್ಧನೆ ಈ ಹಿಂದೆ 2017 ರಿಂದ 2022 ರವರೆಗೆ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿದ್ದರು.

Pic credit: Google

ಕಳೆದ ವರ್ಷ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಲು ನಿರ್ಧರಿಸಿತ್ತು. ಮಾರ್ಕ್ ಬೌಚರ್ ಅವರ ನೇತೃತ್ವದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

Pic credit: Google

ಇದೀಗ ಮಾರ್ಕ್ ಬೌಚರ್ ತಂಡದಿಂದ ಹೊರಬಿದ್ದ ನಂತರ ಪಾಂಡ್ಯ ನಾಯಕತ್ವವೂ ಅಪಾಯದಲ್ಲಿದೆ. ಅವರ ನಾಯಕತ್ವದಲ್ಲಿ ತಂಡದ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು ಮತ್ತು ತಂಡದ ಈ ನಿರ್ಧಾರವೂ ವಿವಾದಾಸ್ಪದವಾಗಿತ್ತು.

Pic credit: Google

ಮಾರ್ಕ್ ಬೌಚರ್ ಅವರನ್ನು 2023 ರಲ್ಲಿ ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಆದರೆ ಅವರ ನೇತೃತ್ವದಲ್ಲಿ ತಂಡದ ಪ್ರದರ್ಶನ ಕಳಪೆಯಾಗಿತ್ತು. ಈ ಕಾರಣದಿಂದಾಗಿ ಮುಂಬೈ ತಂಡವು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ.

Pic credit: Google

ಮತ್ತೆ ಮುಖ್ಯ ಕೋಚ್ ಆಗಿರುವ ಮಹೇಲಾ ಜಯವರ್ಧನೆ, ರೋಹಿತ್ ಶರ್ಮಾ ಜೊತೆಗೆ ಮುಂಬೈ ಇಂಡಿಯನ್ಸ್ ತಂಡವನ್ನು ಮೂರು ಬಾರಿ ಐಪಿಎಲ್ ಚಾಂಪಿಯನ್ ಮಾಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ರೋಹಿತ್ ಮತ್ತೊಮ್ಮೆ ನಾಯಕತ್ವ ಸ್ವೀಕರಿಸಬಹುದು.

Pic credit: Google

ಮುಂಬೈ ಇಂಡಿಯನ್ಸ್ ನಾಯಕತ್ವದ ರೇಸ್‌ನಲ್ಲಿ ಸೂರ್ಯಕುಮಾರ್ ಯಾದವ್ ಹೆಸರು ಸೇರಿದೆ. ಪ್ರಸ್ತುತ ಸೂರ್ಯ ಭಾರತ ಟಿ20 ತಂಡದ ನಾಯಕರೂ ಆಗಿದ್ದು, ಅವರ ನಾಯಕತ್ವದಲ್ಲಿ ತಂಡದ ಪ್ರದರ್ಶನ ಕೂಡ ಅತ್ಯುತ್ತಮವಾಗಿದೆ.