2008 ರಲ್ಲಿ ಪ್ರಾರಂಭವಾದ ಐಪಿಎಲ್ ಈಗ ಕ್ರಿಕೆಟ್‌ನ ಅತಿದೊಡ್ಡ ಲೀಗ್ ಆಗಿದೆ. ಆವೃತ್ತಿಗಳು ಕಳೆದಂತೆ ಈ ಲೀಗ್ನ ಬ್ರ್ಯಾಂಡ್ ಮೌಲ್ಯ 1 ಲಕ್ಷ ಕೋಟಿ ದಾಟಿದೆ.
Pic credit: Google
2009 ರಲ್ಲಿ ಸುಮಾರು 17 ಸಾವಿರ ಕೋಟಿ ಬ್ರಾಂಡ್ ಮೌಲ್ಯವನ್ನು ಹೊಂದಿದ್ದ ಈ ಲೀಗ್ 2023 ರಲ್ಲಿ ಮೊದಲ ಬಾರಿಗೆ 10 ಶತಕೋಟಿ ಡಾಲರ್‌ಗಳನ್ನು ಮುಟ್ಟಿತ್ತು. ಅದು ಈಗ 12 ಬಿಲಿಯನ್ ಡಾಲರ್‌ಗೆ ತಲುಪಿದೆ.
Pic credit: Google
ವರದಿಗಳ ಪ್ರಕಾರ ಈ ಬಾರಿ 4 ತಂಡಗಳ ಬ್ರಾಂಡ್ ಮೌಲ್ಯ 100 ಮಿಲಿಯನ್ ಡಾಲರ್ ದಾಟಿದೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಹೆಸರುಗಳು ಸೇರಿವೆ.
Pic credit: Google
ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್‌ನ ಬ್ರ್ಯಾಂಡ್ ಮೌಲ್ಯವು ಅತ್ಯಧಿಕವಾಗಿದ್ದು, ಅದರ ಬ್ರಾಂಡ್ ಮೌಲ್ಯವು 52% ರಷ್ಟು ಹೆಚ್ಚಾಗಿದೆ. ಆ ಪ್ರಕಾರ ಸಿಎಸ್ಕೆಯ ಬ್ರ್ಯಾಂಡ್ ಮೌಲ್ಯ ಸುಮಾರು 1034 ಕೋಟಿ ರೂ. ತಲುಪಿದೆ.
Pic credit: Google
ಮುಂಬೈ ಇಂಡಿಯನ್ಸ್ನ ಬ್ರ್ಯಾಂಡ್ ಮೌಲ್ಯ ಕೂಡ ಶೇ.36ರಷ್ಟು ಏರಿಕೆಯಾಗಿದ್ದು, ಆ ಪ್ರಕಾರ ಸುಮಾರು 1008 ಕೋಟಿ ರೂ. ತಲುಪಿದೆ.
Pic credit: Google
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲದಿದ್ದರೂ ಅದರ ಬ್ರ್ಯಾಂಡ್ ಮೌಲ್ಯವು 67% ರಷ್ಟು ಏರಿಕೆಯಾಗಿ $ 117 ಮಿಲಿಯನ್‌ಗೆ ಅಂದರೆ ಸುಮಾರು ರೂ 991 ಕೋಟಿಗೆ ತಲುಪಿದೆ.
Pic credit: Google
ಕಳೆದ ಸೀಸನ್ನಲ್ಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್‌ನ ಬ್ರ್ಯಾಂಡ್ ಮೌಲ್ಯವು 38% ರಷ್ಟು ಹೆಚ್ಚಾಗಿದ್ದು, ಅಂದಾಜು ರೂ 923 ಕೋಟಿ ಆಗಿದೆ.