ಟೀಂ ಇಂಡಿಯಾದ ಹಿರಿಯ ಆಟಗಾರರನ್ನು ಜಯ್ ಶಾ ಹೊಗಳಿದ್ದು ಯಾಕೆ?
30 November 2024
Pic credit: Google
ಪೃಥ್ವಿ ಶಂಕರ
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಟೂರ್ನಿಯಲ್ಲಿ ಟೀಂ ಇಂಡಿಯಾದ ಹಲವು ಸ್ಟಾರ್ ಆಟಗಾರರು ಆಡುತ್ತಿದ್ದು, ಈ ಟೂರ್ನಿಯ ಬಗ್ಗೆ ಅಭಿಮಾನಿಗಳಲ್ಲಿ ವಿಭಿನ್ನ ಉತ್ಸಾಹ ಕಂಡು ಬರುತ್ತಿದೆ.
Pic credit: Google
ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಭುವನೇಶ್ವರ್ ಕುಮಾರ್ ಮತ್ತು ತಿಲಕ್ ವರ್ಮಾ ಅವರಂತಹ ಸ್ಟಾರ್ ಆಟಗಾರರು ಕೂಡ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಆಡುತ್ತಿದ್ದಾರೆ.
Pic credit: Google
ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ಟೂರ್ನಿಯಲ್ಲಿ ಆಡುತ್ತಿರುವ ಹಿರಿಯ ಆಟಗಾರರನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
Pic credit: Google
ನಮ್ಮ ಪ್ರಮುಖ ದೇಶೀಯ ಟಿ20 ಸ್ಪರ್ಧೆಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಹಿರಿಯ ಸದಸ್ಯರು ಭಾಗವಹಿಸಿರುವುದು ಸ್ಪರ್ಧೆಗೆ ಇನ್ನಷ್ಟು ಉತ್ಸಾಹವನ್ನು ತಂದಿದೆ ಎಂದು ಜಯ್ ಶಾ ಪೋಸ್ಟ್ ಹಂಚಿಕೊಂಡಿದ್ದಾರೆ.
Pic credit: Google
ಈ ಹಿಂದೆ ಟೀಂ ಇಂಡಿಯಾದ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಆಡಬೇಕು ಎಂದು ಬಿಸಿಸಿಐ ನಿಯಮ ಹೊರಡಿಸಿತ್ತು. ಈ ಕಾರಣದಿಂದಾಗಿ ಈ ಎಲ್ಲಾ ಆಟಗಾರರು ದೇಶೀಯ ಪಂದ್ಯಾವಳಿಗಳಲ್ಲಿ ಆಡುತ್ತಿದ್ದಾರೆ.
Pic credit: Google
ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಆಡುವುದಕ್ಕೂ ಮೊದಲು, ಟೀಂ ಇಂಡಿಯಾದ ಅನೇಕ ಹಿರಿಯ ಆಟಗಾರರು ಸಹ ರಣಜಿ ಟ್ರೋಫಿಯಲ್ಲಿ ಭಾಗವಹಿಸಿದ್ದರು.