ದೇಶೀ ಕ್ರಿಕೆಟ್ ಆಡುತ್ತಿರುವ ಕರುಣ್​ ನಾಯರ್​ಗೆ ಸಿಗುವ ವೇತನವೆಷ್ಟು?

13 January 2025

Pic credit: Google

ಪೃಥ್ವಿ ಶಂಕರ

ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ತಂಡದ ನಾಯಕನಾಗಿ ಅಬ್ಬರ ಸೃಷ್ಟಿಸಿರುವ ಕನ್ನಡಿಗ ಕರುಣ್ ನಾಯರ್ ಈ ಟೂರ್ನಿಯಲ್ಲಿ ಇದುವರೆಗೆ 5 ಶತಕ ಸಿಡಿಸಿದ್ದಾರೆ.

Pic credit: Google

ಹೀಗಾಗಿ ಕರುಣ್ ನಾಯರ್ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಅವರು ಟೀಂ ಇಂಡಿಯಾಗೆ ಮರಳಬಹುದು ಎಂದು ಹೇಳಲಾಗುತ್ತಿದೆ.

Pic credit: Google

ಕಳೆದ 8 ವರ್ಷಗಳಿಂದ ಟೀಂ ಇಂಡಿಯಾದಲ್ಲಿ ಸ್ಥಾನಕ್ಕಾಗಿ ಕಾಯುತ್ತಿರುವ ಕರುಣ್ ನಾಯರ್ ಅವರ ಆದಾಯದ ಮೂಲ ಯಾವುದು? ಅವರಿಗೆ ಸಿಗುವ ಸಂಬಳ ಎಷ್ಟು?

Pic credit: Google

ಕರುಣ್ ನಾಯರ್ ಟೀಂ ಇಂಡಿಯಾದಿಂದ ಹೊರಗಿರುವ ಕಾರಣ ಅವರು ಕೇಂದ್ರ ಒಪ್ಪಂದವನ್ನು ಹೊಂದಿಲ್ಲ. ಆದರೆ ಅವರು ದೇಶೀಯ ಕ್ರಿಕೆಟ್ ಆಡುವ ಮೂಲಕ ಹಣ ಸಂಪಾಧಿಸುತ್ತಾರೆ.

Pic credit: Google

ಕರುಣ್ ನಾಯರ್ ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಆಡಲು ತಲಾ 60,000 ರೂ. ವೇತನ ಪಡೆಯುತ್ತಾರೆ.

Pic credit: Google

\ಹಾಗೆಯೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಕ್ಕೆ ಕರುಣ್ ನಾಯರ್ 17.5 ಸಾವಿರ ರೂ. ವೇತನ ಪಡೆಯುತ್ತಾರೆ.

Pic credit: Google

ಕರುಣ್ ನಾಯರ್ ಐಪಿಎಲ್ ನ 9 ಸೀಸನ್​ಗಳನ್ನು ಆಡಿದ್ದು, ಈಗ ಈ ವರ್ಷ 10ನೇ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ.

Pic credit: Google

ಐಪಿಎಲ್ 2025 ರಲ್ಲಿ ಕರುಣ್ ನಾಯರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 30 ಲಕ್ಷಕ್ಕೆ ಖರೀದಿಸಿದೆ.

Pic credit: Google