99 ರನ್​ಗೆ ಔಟಾದ 10ನೇ ಭಾರತೀಯ ರಿಷಬ್ ಪಂತ್

19 october 2024

Pic credit: Google

ಪೃಥ್ವಿ ಶಂಕರ

Pic credit: Google

ಬೆಂಗಳೂರು ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಟೀಂ ಇಂಡಿಯಾ ಅತ್ಯುತ್ತಮ ಪ್ರದರ್ಶನ ನೀಡಿತು. ತಂಡದ ಪರ ಸರ್ಫರಾಜ್ ಖಾನ್ ಮತ್ತು ರಿಷಬ್ ಪಂತ್ 177 ರನ್‌ಗಳ ಅದ್ಭುತ ಜೊತೆಯಾಟ ಆಡಿದರು.

Pic credit: Google

ಈ ಸಮಯದಲ್ಲಿ, ಸರ್ಫರಾಜ್ ತಮ್ಮ ಮೊದಲ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರೆ, ರಿಷಬ್ ಪಂತ್ ಮಾತ್ರ 99 ರನ್ ಗಳಿಸಿ ಔಟಾದರು

Pic credit: Google

ರಿಷಬ್ ಪಂತ್ ಈ ಮೂಲಕ ನರ್ವಸ್ 90ಗೆ 7 ನೇ ಬಾರಿಗೆ ಬಲಿಯಾದರೆ, ಟೆಸ್ಟ್ ಪಂದ್ಯದಲ್ಲಿ 99 ರನ್‌ಗಳಿಗೆ ಔಟಾದ 9ನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

Pic credit: Google

ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ 1997 ರಲ್ಲಿ ಶ್ರೀಲಂಕಾ ವಿರುದ್ಧ ಮತ್ತು 2002 ರಲ್ಲಿ ಇಂಗ್ಲೆಂಡ್ ವಿರುದ್ಧ 99 ರನ್ ಗಳಿಸಿ ಔಟಾಗಿದ್ದರು.

Pic credit: Google

2010 ರಲ್ಲಿ, ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಕೂಡ ಶ್ರೀಲಂಕಾ ವಿರುದ್ಧದ ಕೊಲಂಬೊ ಟೆಸ್ಟ್‌ನಲ್ಲಿ 99 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು.

Pic credit: Google

ಪಂತ್​ಗೂ ಮೊದಲು, ಎಂಎಸ್ ಧೋನಿ 99 ರನ್​ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಶತಕ ವಂಚಿತರಾದ ಏಕೈಕ ಭಾರತೀಯ ವಿಕೆಟ್ ಕೀಪರ್ ಎನಿಸಿಕೊಂಡಿದ್ದರು. ಧೋನಿ, 2012ರಲ್ಲಿ ಇಂಗ್ಲೆಂಡ್ ವಿರುದ್ಧ ರನೌಟ್ ಆಗಿದ್ದರು.

Pic credit: Google

2014 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಮುರಳಿ ವಿಜಯ್ 99 ರನ್ ಗಳಿಸಿ ಔಟಾಗಿದ್ದರು.

Pic credit: Google

ಇವರಲ್ಲದೆ ಟೀಂ ಇಂಡಿಯಾದ ಮಾಜಿ ಆಟಗಾರರಾದ ಪಂಕಜ್ ರಾಯ್, ದಿಗ್ಗಜ ನಾಯಕ ಅಜಿತ್ ವಾಡೇಕರ್, ರುಸಿ ಸೂರ್ತಿ, ಎಂಎಲ್ ಜೈಸಿಂಹ ಮತ್ತು ನವಜೋತ್ ಸಿಂಗ್ ಸಿಧು ಕೂಡ 99 ರನ್​ಗೆ ವಿಕೆಟ್ ಒಪ್ಪಿಸಿ ಶತಕ ವಂಚಿತರಾಗಿದ್ದರು.