ಅತ್ಯಲ್ಪ ಮೊತ್ತಕ್ಕೆ ಅಧಿಕ ಬಾರಿ ಆಲೌಟ್ ಆದ ತಂಡ ಯಾವುದು? ಭಾರತಕ್ಕೆ ಯಾವ ಸ್ಥಾನ?

17 october 2024

Pic credit: Google

ಪೃಥ್ವಿ ಶಂಕರ

Pic credit: Google

ನ್ಯೂಜಿಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಕೇವಲ 46 ರನ್‌ಗಳಿಗೆ ಆಲೌಟ್ ಆಗಿದೆ.

Pic credit: Google

ವಾಸ್ತವವಾಗಿ ಏಷ್ಯಾ ನೆಲದಲ್ಲಿ ಟೀಂ ಇಂಡಿಯಾ ಇದುವರೆಗೆ ಇಷ್ಟು ಕಡಿಮೆ ರನ್​ಗಳಿಗೆ ಆಲೌಟ್ ಆಗಿರಲಿಲ್ಲ. ಆದರೆ ಇದೀಗ ಈ ಅನಗತ್ಯ ದಾಖಲೆ ಟೀಂ ಇಂಡಿಯಾ ಖಾತೆ ಸೇರಿದೆ.

Pic credit: Google

ಅಂದಹಾಗೆ, 50ಕ್ಕಿಂತ ಕಡಿಮೆ ಸ್ಕೋರ್‌ಗೆ ಆಲೌಟ್ ಆದ ಮೊದಲ ತಂಡ ಟೀಂ ಇಂಡಿಯಾ ಅಲ್ಲ. ಭಾರತಕ್ಕೂ ಮುನ್ನ ಹೆಚ್ಚು ಬಾರಿ 50ಕ್ಕಿಂತ ಕಡಿಮೆ ಸ್ಕೋರ್‌ಗೆ ಆಲೌಟ್ ಆದ ಮೂರು ತಂಡಗಳಿವೆ.

Pic credit: Google

ಟೆಸ್ಟ್ ಕ್ರಿಕೆಟ್‌ನಲ್ಲಿ ಅಧಿಕ ಬಾರಿ 50 ರನ್​ಗಳೊಳಗೆ ಆಲೌಟ್ ಆದ ತಂಡವೆಂದರೆ ಅದು ದಕ್ಷಿಣ ಆಫ್ರಿಕಾ. ಈ ತಂಡವು 6 ಬಾರಿ ಐವತ್ತಕ್ಕಿಂತ ಕಡಿಮೆ ಸ್ಕೋರ್‌ಗೆ ಆಲೌಟ್ ಆಗಿದೆ.

Pic credit: Google

4 ಬಾರಿ ಐವತ್ತಕ್ಕಿಂತ ಕಡಿಮೆ ಸ್ಕೋರ್‌ಗೆ ಆಲೌಟ್ ಆಗಿರುವ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್‌ ತಂಡ 3 ಬಾರಿ ಈ ಬೇಡದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

Pic credit: Google

ಟೀಂ ಇಂಡಿಯಾ ಮೂರನೇ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಐವತ್ತಕ್ಕಿಂತ ಕಡಿಮೆ ಸ್ಕೋರ್‌ಗೆ ಆಲೌಟ್ ಆಗಿದ್ದು, ಎರಡು ಬಾರಿ 50 ರನ್​ಗಳೊಳಗೆ ಆಲೌಟ್ ಆಗಿರುವ ಇಂಗ್ಲೆಂಡ್ ತಂಡ ನಂತರದ ಸ್ಥಾನದಲ್ಲಿದೆ.

Pic credit: Google

ಉಳಿದಂತೆ ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳು ಒಮ್ಮೆ ಮಾತ್ರ ಐವತ್ತಕ್ಕಿಂತ ಕಡಿಮೆ ಸ್ಕೋರ್‌ಗೆ ಆಲೌಟ್ ಆದ ದಾಖಲೆ ಬರೆದಿವೆ.